ಗೋಂಡಿಯಾ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು, ರಾಷ್ಟ್ರೀಯವಾದ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಫೆಬ್ರುವರಿ 26 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ಪ್ರಫುಲ್ ಪಟೇಲ್ ಬುಧವಾರ ಹೇಳಿದ್ದಾರೆ.
.ಸುನೇತ್ರಾ ಆಯ್ಕೆ ಹಿಂದೆ ಬಿಜೆಪಿ ಕೈವಾಡ: ಶಿವಸೇನಾ (ಯುಬಿಟಿ) .
ಈ ಹಿಂದೆ ಈ ಸ್ಥಾನದಲ್ಲಿ ಅಜಿತ್ ಪವಾರ್ ಇದ್ದರು. ಜನವರಿ 28 ರಂದು ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು. ಇದೀಗ ಅವರ ಪತ್ನಿಗೆ ಜವಾಬ್ದಾರಿ ನೀಡಲಾಗುತ್ತಿದೆ.

‘ಅಜಿತ್ ದಾ ಅವರ ಬಳಿಕ ಪಕ್ಷದಲ್ಲಿ ಆವರಿಸಿದ ಶೂನ್ಯತೆಯನ್ನು ತುಂಬುವ ಪ್ರಕ್ರಿಯೆಯಲ್ಲಿ ನಾವು ಇದ್ದೇವೆ. ನಮ್ಮದು ಸ್ವತಂತ್ರ ಪಕ್ಷವಾಗಿದ್ದು, ನಮ್ಮ ಪಕ್ಷಕ್ಕೆ ಸರಿ ಅನಿಸಿದ್ದನ್ನುಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ನಮ್ಮ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಫೆ. 26ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದು ಅವರು ವರದಿಗಾರರೊಂದಿಗೆ ಹೇಳಿದ್ದಾರೆ.
.ಸುನೇತ್ರಾ ಪದಗ್ರಹಣದ ಬಗ್ಗೆ ತಿಳಿದಿರಲಿಲ್ಲ: ಶಶಿಕಾಂತ್ ಶಿಂದೆ.
ಎನ್ಸಿಪಿ ಬಣಗಳ ವಿಲೀನ ಸಂಬಂಧ ಕೇಳಿದ ಪ್ರಶ್ನೆಗೆ ‘ಅದರ ಬಗ್ಗೆ ಮಾತನಾಡಲು ಈಗ ಸೂಕ್ತ ಸಮಯವಲ್ಲ’ ಎಂದು ಹೇಳಿದ್ದಾರೆ.
.ಸುಚೇತಾ...ಸುನೇತ್ರಾ: ಸಿಎಂ, ಡಿಸಿಎಂ ಹುದ್ದೆಗೇರಿದ ಮಹಿಳಾಮಣಿಗಳಿವರು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.