ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಚುನಾವಣೆ ಫಲಿತಾಂಶ: ಮತ್ತೆ ಸಾಮರ್ಥ್ಯ ಸಾಬೀತುಪಡಿಸಿದ ಸುನೀಲ್ ಕನುಗೋಲು

ಚುನಾವಣಾ ಕಾರ್ಯತಂತ್ರ ನಿಪುಣ ಸುನೀಲ್‌ ಕನುಗೋಲು
Published 3 ಡಿಸೆಂಬರ್ 2023, 14:35 IST
Last Updated 4 ಡಿಸೆಂಬರ್ 2023, 8:29 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಕಾರ್ಯತಂತ್ರ ನಿಪುಣ ಸುನೀಲ್‌ ಕನುಗೋಲು ಅವರು ತೆಲಂಗಾಣದಲ್ಲಿ ಕೂಡ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸಾಧಿಸಿದ ಗೆಲುವಿನಲ್ಲಿ ಸುನೀಲ್ ಅವರ ಕಾರ್ಯತಂತ್ರ ಕೂಡ ಕೆಲಸ ಮಾಡಿತ್ತು. ಈಗ ಅವರು ತೆಲಂಗಾಣದಲ್ಲಿಯೂ ತಮ್ಮ ಜಾಣ್ಮೆ ತೋರಿಸಿದ್ದಾರೆ.

ಸುನೀಲ್ ಅವರು ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಜೊತೆಗೂಡಿ ಪಕ್ಷದ ಕಾರ್ಯತಂತ್ರವನ್ನು ರೂಪಿಸಿದ್ದರು. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಸುನೀಲ್ ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದ ಕಾರಣಕ್ಕೆ ಅವರು ಯಶಸ್ಸು ಕಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸುನೀಲ್ ಅವರು ಕರ್ನಾಟಕದವರು. ಕರ್ನಾಟಕದಲ್ಲಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್ ಪಕ್ಷ ನಡೆಸಿದ ‘ಪೇಸಿಎಂ’ ಅಭಿಯಾನದ ಹಿಂದೆ ಸುನೀಲ್ ಅವರ ಆಲೋಚನೆಗಳು ಕೆಲಸ ಮಾಡಿದ್ದವು ಎನ್ನಲಾಗಿದೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ನಡೆಸಿದ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಸಾಮ್ಯತೆಗಳು ಹಲವು ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT