ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Assembly Election Results | 4 ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ಮತದ ಪಾಲು ಎಷ್ಟು?

Published 4 ಡಿಸೆಂಬರ್ 2023, 7:13 IST
Last Updated 4 ಡಿಸೆಂಬರ್ 2023, 7:13 IST
ಅಕ್ಷರ ಗಾತ್ರ

ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿಗೆ ಭಾರಿ ಗೆಲುವು ದಕ್ಕಿದೆ. ಆಡಳಿತ ವಿರೋಧಿ ಅಲೆಯನ್ನು ಅನುಕೂಲಕರವಾಗಿ ಪರಿವರ್ತಿಸಿಕೊಂಡ ಕಾಂಗ್ರೆಸ್‌ ತೆಲಂಗಾಣದಲ್ಲಿ ಗೆದ್ದಿದೆ.

ಮಧ್ಯಪ್ರದೇಶದ 230 ಸ್ಥಾನಗಳ ಪೈಕಿ 163 ಸ್ಥಾನಗಳನ್ನು, ರಾಜಸ್ಥಾನದ 199 ಸ್ಥಾನಗಳಲ್ಲಿ 115 ಸ್ಥಾನಗಳನ್ನು ಹಾಗೂ ಛತ್ತೀಸ್‌ಗಢದ 90 ಸ್ಥಾನಗಳಲ್ಲಿ 54 ಸ್ಥಾನಗಳನ್ನು ಜಯಿಸುವ ಮೂಲಕ ಬಿಜೆಪಿ ಗೆಲುವಿನ ನಗೆ ಬೀರಿದೆ. ತೆಲಂಗಾಣದ 119 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಸಮಾಧಾನ ಪಟ್ಟಿದೆ.

ರಾಜಸ್ಥಾನ

ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರವನ್ನು ಬದಲಿಸುವ ಪರಂಪರೆಯನ್ನು ರಾಜಸ್ಥಾನ ಮುಂದುವರಿಸಿದೆ. 2018ರಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದೆ.

ಮತ ಪ್ರಮಾಣ

ಬಿಜೆಪಿ – ಶೇ. 41.69

ಕಾಂಗ್ರೆಸ್‌ – ಶೇ. 39.53

ಇತರೆ – ಶೇ. 12.69

ಆರ್‌ಎಲ್‌ಟಿಪಿ ಶೇ.2.39

ಬಿಎಸ್‌ಪಿ – ಶೇ. 1.82

ನೋಟಾ – ಶೇ.0.96

ಸಿಪಿಎಂ – ಶೇ.0.96

ಮಧ್ಯಪ್ರದೇಶ

ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತ ಬಿಜೆಪಿಯು ಹಿಂದಿ ಸೀಮೆಯ ಮಧ್ಯಪ್ರದೇಶದಲ್ಲಿ ಚಮತ್ಕಾರ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪ್ರಚಂಡ ದಿಗ್ವಿಜಯ ಸಾಧಿಸಿದೆ.

ಮತ ಪ್ರಮಾಣ

ಬಿಜೆಪಿ– ಶೇ. 48.56

ಕಾಂಗ್ರೆಸ್ – ಶೇ. 40.40

ಇತರೆ – ಶೇ. 6.66

ಬಿಎಸ್‌ಪಿ – ಶೇ.3.40

ನೋಟಾ – ಶೇ. 0.98

ಛತ್ತೀಸ್‌ಗಢ

ಮತದಾನೋತ್ತರ ಸಮೀಕ್ಷೆಗಳ ಅಂದಾಜನ್ನು ಹುಸಿಗೊಳಿಸಿ ಛತ್ತೀಸಗಢದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದೆ. 90 ಸಂಖ್ಯಾಬಲದ ರಾಜ್ಯ ವಿಧಾನಸಭೆಯಲ್ಲಿ 54 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಕಾಂಗ್ರೆಸ್ 35 ಸ್ಥಾನಗಳನ್ನು ಮಾತ್ರ ಗೆದ್ದುಕೊಂಡಿದೆ.

ಮತ ಪ್ರಮಾಣ

ಬಿಜೆಪಿ– ಶೇ.46.29

ಕಾಂಗ್ರೆಸ್ – ಶೇ. 42.23

ಇತರೆ – ಶೇ. 8.17

ಬಿಎಸ್‌ಪಿ– ಶೇ.2.05

ನೋಟಾ – ಶೇ. 1.26

ತೆಲಂಗಾಣ

ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಅವರ ಭದ್ರಕೋಟೆಯನ್ನು ಭೇದಿಸಿರುವ ಕಾಂಗ್ರೆಸ್‌ ವಿಜಯದ ಮಾಲೆ ಧರಿಸಿದೆ. ತೆಲಂಗಾಣದಲ್ಲಿ 119 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗೆಲ್ಲುವ ಮೂಲಕ ಕೆಸಿಆರ್‌ ಹ್ಯಾಟ್ರಿಕ್‌ ಗೆಲುವಿಗೆ ಕಾಂಗ್ರೆಸ್‌ ಬ್ರೇಕ್‌ ಹಾಕಿದೆ.

ಮತ ಪ್ರಮಾಣ

ಕಾಂಗ್ರೆಸ್ – ಶೇ.39.40

ಬಿಆರ್‌ಎಸ್‌– ಶೇ.37.35

ಬಿಜೆಪಿ– ಶೇ.13.89

ಇತರೆ – ಶೇ. 6.41

ಎಐಎಂಐಎಂ– ಶೇ.2.21

ನೋಟಾ – ಶೇ. 0.73

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT