ಎನ್‌ಎಚ್‌ಎಐ ವಿರುದ್ಧ ಅಸಮಾಧಾನ
ಹೆದ್ದಾರಿಯಿಂದ ನಾಯಿಗಳನ್ನು ತೆರವುಗೊಳಿಸುವ ಹೊಣೆಗಾರಿಕೆಯನ್ನು ರಾಜ್ಯಗಳ ಮೇಲೆ ಹೊರಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಕ್ರಮಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ‘ದೇಶದಲ್ಲಿ ಜನರು ಸಾಯುತ್ತಿರುವುದು ನಾಯಿ ಕಡಿತದಿಂದ ಮಾತ್ರ ಅಲ್ಲ. ರಸ್ತೆಗಳಲ್ಲಿ ಇತರೆ ಪ್ರಾಣಿಗಳಿಂದ ಉಂಟಾಗುವ ಅಪಘಾತಗಳಿಂದಲೂ ಜೀವ ಹಾನಿ ಸಂಭವಿಸುತ್ತಿದೆ. ಕಳೆದ 20 ದಿನಗಳಲ್ಲಿ ಇಬ್ಬರು ನ್ಯಾಯಮೂರ್ತಿಗಳು ಪ್ರಾಣಿಗಳಿಂದಾಗಿ ಹೆದ್ದಾರಿಗಳಲ್ಲಿ ಅಪಘಾತಕ್ಕೆ ಒಳಗಾಗಿದ್ದಾರೆ’ ಎಂದು ಹೇಳಿತು.