ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇದೇ ಮೊದಲ ಬಾರಿಗೆ ನಟಿ ರಿಯಾ ಚಕ್ರವರ್ತಿ ಅವರವಿಚಾರಣೆಯನ್ನು ಶುಕ್ರವಾರ ನಡೆಸಿದೆ.
ಪ್ರಕರಣದ ವಿಚಾರಣೆ ನಡೆಸಲು ಡಿಆರ್ಡಿಒ ಅತಿಥಿ ಗೃಹಕ್ಕೆಬೆಳಿಗ್ಗೆ 10.30ರ ಒಳಗೆ ಹಾಜರಾಗುವಂತೆ ರಿಯಾ ಚಕ್ರವರ್ತಿಗೆ ಸಮನ್ಸ್ ನೀಡಲಾಗಿತ್ತು.ಇದೇ ಸಂದರ್ಭದಲ್ಲಿ, ಸುಶಾಂತ್ ಸ್ನೇಹಿತ ಸಿದ್ಧಾರ್ಥ್ ಪಿಠಾಣಿ, ಅಡುಗೆ ಕೆಲಸಕ್ಕಿದ್ದ ನೀರಜ್ ಸಿಂಗ್ ಅವರ ವಿಚಾರಣೆಯನ್ನು ನಡೆಸಲಾಗಿದೆ.
ಪ್ರಕರಣದ ತನಿಖೆಗಾಗಿ ನಗರಕ್ಕೆ ಬಂದಿರುವ ಸಿಬಿಐ ತಂಡ ಸಾಂತಾಕ್ರೂಸ್ನಲ್ಲಿ ಇರುವ ಡಿಆರ್ಡಿಒ ಅತಿಥಿ ಗೃಹದಲ್ಲಿ ಎಂಟು ದಿನಗಳಿಂದ ಉಳಿದುಕೊಂಡಿದೆ.