ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7 ಗುರಿಗಳನ್ನು ಸಾಧಿಸುವ ಬಜೆಟ್‌ ಮಂಡಿಸಿದ ತಮಿಳುನಾಡು ಸರ್ಕಾರ

Published 19 ಫೆಬ್ರುವರಿ 2024, 9:43 IST
Last Updated 19 ಫೆಬ್ರುವರಿ 2024, 9:43 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಸರ್ಕಾರವು ಸೋಮವಾರ ಬಜೆಟ್‌ ಮಂಡನೆ ಮಾಡಿದ್ದು, ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ‘ತಮಿಳರ ಅಭಿವೃದ್ಧಿಗೆ 7 ಗುರಿಗಳನ್ನು’ ಸಾಕಾರಗೊಳಿಸಲು ಹಲವು ಯೋಜನೆಗಳನ್ನು ಘೋಷಿಸಿದೆ.

ಹಣಕಾಸು ಸಚಿವ ತಂಗಮ್ ಥೆನ್ನರಸು ಅವರು ಕಾಗದ ರಹಿತ ಇ–ಬಜೆಟ್‌ ಮಂಡಿಸಿದ್ದು, ‘2024–25ನೇ ಸಾಲಿನಲ್ಲಿ ₹49,279 ಕೋಟಿ ಆದಾಯ ಕೊರತೆಯಾಗಲಿದೆ’ ಎಂದು ‌ತಿಳಿಸಿದ್ದಾರೆ.

‘ಮಾಜಿ ಮುಖ್ಯಮಂತ್ರಿ ಎಮ್‌.ಕರುಣಾನಿಧಿ ಹೆಸರಲ್ಲಿ ವಸತಿ ಯೋಜನೆಯನ್ನು ರೂಪಿಸಲಾಗಿದೆ. 2030ರ ವೇಳೆ ಎಲ್ಲರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 8 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ₹3,500 ಕೋಟಿ ಮೀಸಲಿರಿಸಲಾಗಿದೆ ’ ಎಂದು ತಿಳಿಸಿದರು.

‘₹3,48,289 ಕೋಟಿ ಕಂದಾಯ ವೆಚ್ಚವಿದ್ದು, ₹1,08,690 ಕೋಟಿ ವಿತ್ತೀಯ ಕೊರತೆ ಆಗಲಿದೆ. ಇದು ಜಿಎಸ್‌ಡಿಪಿಯ ಶೇ 3.44 ರಷ್ಟಿರಲಿದೆ’ ಎಂದು ತಿಳಿಸಿದ್ದಾರೆ. 

‘ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳಿಗಾಗಿ ₹300 ಕೋಟಿ ಮೀಸಲಿರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT