ಕಡಲೂರು (ತಮಿಳುನಾಡು): ರೈಲ್ವೆ ಹಳಿ ದಾಟುತ್ತಿದ್ದ ಶಾಲಾ ವ್ಯಾನ್ಗೆ ಪ್ರಯಾಣಿಕ ರೈಲು ಗುದ್ದಿದ ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕೆ ಏರಿದೆ.

ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ಇಂದು (ಮಂಗಳವಾರ) ಬೆಳಿಗ್ಗೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ತಮಿಳುನಾಡು | ಶಾಲಾ ವ್ಯಾನ್ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸಾವು.
ಘಟನೆ ಸಂಬಂಧ ರೈಲ್ವೆ ಕ್ರಾಸಿಂಗ್ ಬಳಿ ನಿಯೋಜನೆಗೊಂಡಿದ್ದ ಗೇಟ್ ಕೀಪರ್ಅನ್ನು ಪ್ರಶ್ನಿಸಿರುವ ದಕ್ಷಿಣ ರೈಲ್ವೆ, ಆತನನ್ನು ಅಮಾನತುಗೊಳಿಸಿದ್ದು, ದುರಂತಕ್ಕೆ ಕ್ಷಮೆಯಾಚಿಸಿದೆ.

ಮಂಗಳವಾರ ಬೆಳಿಗ್ಗೆ 7.45ರ ಹೊತ್ತಿಗೆ ಕಡಲೂರು ಮತ್ತು ಅಲಪ್ಪಕ್ಕಮ್ ನಡುವಿನ ಗೇಟ್ ಸಂಖ್ಯೆ 170ರಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾವಾಹನ ದಾಟುವಾಗ ವಿಲ್ಲುಪುರಂ–ಮೈಲಾಡುತುರೈ(ರೈಲು ಸಂಖ್ಯೆ 56813) ರೈಲು ಗುದ್ದಿದೆ. ಪರಿಣಾಮ ಹಳಿಯಿಂದ ತುಸು ದೂರಕ್ಕೆ ಹೋಗಿ ಶಾಲಾವಾಹನ ಪಲ್ಟಿಯಾಗಿದೆ.

ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಹಾಕಲಾಗಿತ್ತು, ಆದರೆ ಶಾಲೆಯನ್ನು ತಲುಪುದು ತಡವಾಗುತ್ತದೆ ಎಂದು ಹೇಳಿ ಶಾಲಾ ವಾಹನದ ಚಾಲಕ ಅಲ್ಲಿದ್ದ ಸಿಬ್ಬಂದಿಯಿಂದ ಗೇಟ್ ತೆಗೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸಿಬ್ಬಂದಿ ನಿಯಮವನ್ನು ಉಲ್ಲಂಘಿಸಿ ಗೇಟ್ ತೆಗೆದಿದ್ದಾರೆ, ಹೀಗಾಗಿ ಆತನನ್ನು ಅಮಾನತು ಮಾಡಲಾಗಿದೆ. ಆತನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ ಎಂದು ದಕ್ಷಿಣ ರೈಲ್ವೆ ಹೇಳಿದೆ.

ಘಟನೆ ವೇಳೆ ವಾಹನದಲ್ಲಿ ನಾಲ್ವರು ವಿದ್ಯಾರ್ಥಿಗಳು ಮತ್ತು ಚಾಲಕ ಇದ್ದರು ಎನ್ನಲಾಗಿದೆ. ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಒಬ್ಬ ವಿದ್ಯಾರ್ಥಿ ಹಾಗೂ ಚಾಲಕ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿ ಮಾತನಾಡಿ, ‘ರೈಲ್ವೆ ಗೇಟ್ ತೆರೆದಿತ್ತು, ರೈಲು ಬರುವ ಯಾವ ಶಬ್ಧಗಳೂ ಕೇಳಿಸಲಿಲ್ಲ, ಹೀಗಾಗಿ ಚಾಲಕ ಬಸ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದರು, ಆದರೆ ಏಕಾಏಕಿ ರೈಲು ಬಂದು ಗುದ್ದಿದೆ’ ಎಂದು ಹೇಳಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಚಾಲಕ ಕೂಡ ರೈಲ್ವೆ ಗೇಟ್ ತೆರೆದಿತ್ತು ಎಂದೇ ಹೇಳಿದ್ದಾರೆ.

ಪರಿಹಾರ ಘೋಷಣೆ

ವಿದ್ಯಾರ್ಥಿಗಳ ಸಾವಿಗೆ ವಿಷಾದ ವ್ಯಕ್ತಪಡಿಸಿರುವ ರೈಲ್ವೆ ಇಲಾಖೆ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದೆ. ಗಂಭೀರ ಗಾಯಗೊಂಡವರಿಗೆ ₹2.5 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಂಭೀರ ಗಾಯಾಳುಗಳಿಗೆ ₹1 ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.