ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಗೆ ತೆಲಂಗಾಣದಿಂದ ಸ್ಪರ್ಧಿಸದಿರಲು ಟಿಡಿಪಿ ನಿರ್ಧಾರ

Published 11 ಏಪ್ರಿಲ್ 2024, 10:43 IST
Last Updated 11 ಏಪ್ರಿಲ್ 2024, 10:43 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿರಲು ತೆಲುಗು ದೇಶಂ ಪಕ್ಷ(ಟಿಡಿಪಿ) ನಿರ್ಧರಿಸಿದೆ.

‘ಲೋಕಸಭಾ ಚುನಾವಣೆಗೆ ತೆಲಂಗಾಣದಿಂದ ಟಿಡಿಪಿ ಸ್ಪರ್ಧಿಸುವುದಿಲ್ಲ. ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದರೂ ತೆಲಂಗಾಣದಲ್ಲಿ ಯಾರನ್ನು ಬೆಂಬಲಿಸಬೇಕು ಎಂಬುವುದರ ಬಗ್ಗೆ ಪಕ್ಷ ಇನ್ನೂ ನಿರ್ಧರಿಸಿಲ್ಲ. ಈ ವಿಚಾರದವನ್ನು ಪಕ್ಷದ ಹಿರಿಯ ನಾಯಕರಿಗೆ ಬಿಡಲಾಗಿದೆ’ ಎಂದು ಟಿಡಿಪಿ ವಕ್ತಾರೆ ಜ್ಯೋತ್ಸ್ನಾ ತಿರುನಗರಿ ಸುದ್ದಿಸಂಸ್ಥೆ ಹೇಳಿದ್ದಾರೆ.

‘ಈ ವರ್ಷ ಜೂನ್‌ ಅಥವಾ ಜುಲೈನಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಟಿಡಿಪಿ ತನ್ನ ರಾಜಕೀಯ ಇನ್ನಿಂಗ್ಸ್‌ ಅನ್ನು ತೆಲಂಗಾಣದಲ್ಲಿ ಪುನಾರಂಭಿಸಲಿದೆ’ ಎಂದು ಹೇಳಿದರು.

17 ಲೋಕಸಭಾ ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಮೇ 13ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT