ಠಾಣೆ: ಸರಿಯಾಗಿ ಬರೆದಿಲ್ಲ ಎಂಬ ಕಾರಣಕ್ಕೆ ಆರು ವರ್ಷದ ವಿದ್ಯಾರ್ಥಿಯೊಬ್ಬಳಿಗೆ ಥಳಿಸಿದ ಆರೋಪದಡಿ ಮನೆಪಾಠದ (ಟ್ಯೂಷನ್) ಶಿಕ್ಷಕಿ ವಿರುದ್ಧ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ವಿದ್ಯಾರ್ಥಿನಿಯು ಸರಿಯಾಗಿ ಓದುತ್ತಿಲ್ಲ ಮತ್ತು ಬರೆಯುತ್ತಿಲ್ಲ ಎಂದು ಶಿಕ್ಷಕಿ ಸಾರಿಕಾ ಘಾಗ್ ರೂಲರ್ ಸ್ಕೇಲ್‌ನಿಂದ ಗುರುವಾರ ಬೆಳಿಗ್ಗೆ ಥಳಿಸಿದ್ದಾರೆ’ ಎಂದು ಅವರು ಹೇಳಿದರು.
ಮನೆಗೆ ತೆರಳಿದ ವಿದ್ಯಾರ್ಥಿನಿಯು ತಾಯಿಗೆ ವಿಷಯ ತಿಳಿಸಿದ್ದು, ನಂತರ ಪೋಷಕರು ಪೊಲೀಸರ ಬಳಿ ಶಿಕ್ಷಕಿಯ ವಿರುದ್ಧ ದೂರು ನೀಡಿದ್ದಾರೆ ಎಂದು ಮಾನ್‌ಪಾಡಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದರು.