ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾದಕವಸ್ತು ಖರೀದಿಗೆ ಕ್ರಿಪ್ಟೊಕರೆನ್ಸಿ ಬಳಕೆ: ಸಾಫ್ಟ್‌ವೇರ್ ಎಂಜಿನಿಯರ್ ಬಂಧನ

Published : 10 ಆಗಸ್ಟ್ 2024, 15:46 IST
Last Updated : 10 ಆಗಸ್ಟ್ 2024, 15:46 IST
ಫಾಲೋ ಮಾಡಿ
Comments

ಹೈದರಾಬಾದ್: ಡಾರ್ಕ್‌ ವೆಬ್‌ ಬಳಸಿ ಆನ್‌ಲೈನ್‌ ಮೂಲಕ ಮಾದಕವಸ್ತು ಖರೀದಿಸಲು ಆರ್ಡರ್ ಮಾಡಿ, ಕ್ರಿಪ್ಟೊಕರೆನ್ಸಿ ಬಳಸಿ ಹಣ ಪಾವತಿಸಿದ್ದ ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ತೆಲಂಗಾಣದ ಮಾದಕವಸ್ತು ನಿಗ್ರಹ ಘಟಕದ ತಾಂತ್ರಿಕ ವಿಭಾಗವು, ಈ ಆನ್‌ಲೈನ್‌ ವಹಿವಾಟನ್ನು ಗುರುತಿಸಿದೆ. ಈ ಮೂಲಕ ಡಾರ್ಕ್‌ವೆಬ್‌ ಬಳಸಿ ಮಾದಕವಸ್ತು ಮಾರಾಟ ನಡೆಯುತ್ತಿದ್ದ ಜಾಲವನ್ನು ಪತ್ತೆ ಮಾಡಿದೆ..

ಮಾದಕವಸ್ತು ನಿಗ್ರಹ ಘಟಕದ ತೀವ್ರ ನಿಗಾ ಹಿನ್ನೆಲೆಯಲ್ಲಿ ರಾಜ್ಯವನ್ನು ನೆಲೆಯಾಗಿಸಿಕೊಂಡು ಮಾದಕವಸ್ತು ಸಾಗಣೆ, ಮಾರಾಟದಲ್ಲಿ ತೊಡಗಿದ್ದ ಅನೇಕ ದುಷ್ಕರ್ಮಿಗಳು ತಮ್ಮ ಚಟುವಟಿಕೆಗಳನ್ನು ಕಡಿಮೆ ಮಾಡಿದ್ದಾರೆ ಅಥವಾ ರಾಜ್ಯದಿಂದಲೇ ಹೊರನಡೆದಿದ್ದಾರೆ ಎನ್ನಲಾಗಿದೆ.

ಮಾದಕವಸ್ತು ಮಾರಾಟ ಆರೋಪಿಗಳ ಪತ್ತೆ ಜೊತೆಗೆ ಈಗ ಘಟಕವು, ಆನ್‌ಲೈನ್ ವಹಿವಾಟಿನ ಮೇಲೂ ನಿಗಾ ಇಟ್ಟಿದೆ. ಈ ಘಟಕವು ನೀಡಿದ್ದ ಮಾಹಿತಿ ಆಧರಿಸಿ ಕಮ್ಮಂ ಪಟ್ಟಣದಿಂದ ಸ್ಥಳೀಯ ಪೊಲೀಸರು ಸಾಫ್ಟ್‌ವೇರ್ ಎಂಜಿನಿಯರ್ ನನ್ನು ಬಂಧಿಸಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ಜುಲೈ 31ರಂದು ಡಾರ್ಕ್‌ವೆಬ್‌ ಮೂಲಕ ವಹಿವಾಟು ನಡೆಸಿದ್ದ. ಕ್ರಿಪ್ಟೊಕರೆನ್ಸಿ ಮೂಲಕ ಹಣ ಸಂದಾಯವಾದ ಬಳಿಕ, ಅಸ್ಸಾಂ ಸಿಲ್‌ಪುಖುರಿಯಿಂದ ಮಾದಕವಸ್ತು ಕಳುಹಿಸಲಾಗಿತ್ತು. ಪೊಲೀಸರು ಈ ವಹಿವಾಟು ಗಮನಿಸುತ್ತಿದ್ದರು. ಆ. 8ರಂದು ಸ್ಪೀಡ್‌ ಪೋಸ್ಟ್‌ ಮೂಲಕ ಮಾದಕವಸ್ತು ಮನೆಗೆ ತಲುಪುತ್ತಿದ್ದಂತೆ ಬಂಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT