ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾನೆಟ್‌ ಮೇಲೆ ವ್ಯಕ್ತಿ ಮಲಗಿಸಿ ಕಾರು ಚಾಲನೆ; ಬಾಲಕನಿಂದ ಸ್ಟಂಟ್‌

Published 27 ಮೇ 2024, 16:27 IST
Last Updated 27 ಮೇ 2024, 16:27 IST
ಅಕ್ಷರ ಗಾತ್ರ

ಠಾಣೆ: ಪುಣೆಯಲ್ಲಿನ ಪೋಶೆ ಕಾರು ಅಪಘಾತ ತೀವ್ರ ಚರ್ಚೆಯಲ್ಲಿ ಇರುವಂತೆಯೇ, ವ್ಯಕ್ತಿಯೊಬ್ಬ ಬಾನೆಟ್‌ನ ಮೇಲೆ ಮಲಗಿರುವಂತೆಯೇ, 17 ವರ್ಷದ ಬಾಲಕ ಬಿಎಂಡಬ್ಲ್ಯೂ ಕಾರನ್ನು ವೇಗವಾಗಿ ಚಲಾಯಿಸಿ ‘ಸ್ಟಂಟ್‌’ ಪ್ರದರ್ಶಿಸಿರುವ ಘಟನೆ ಇಲ್ಲಿ ನಡೆದಿದೆ.  

ಕಾರು ಚಾಲನೆಯ ‘ಸ್ಟಂಟ್‌’ನ ವಿಡಿಯೊ ಜಾಲತಾಣದಲ್ಲಿ ಹರಿದಾಡಿದಂತೆಯೇ ಪೊಲಿಸರು ಪ್ರಕರಣ ದಾಖಲಿಸಿದ್ದಾರೆ. ಬಾನೆಟ್‌ನ ಮೇಲೆ ಮಲಗಿ ಬಾಲಕನ ‘ಸ್ಟಂಟ್‌’ಗೆ ಸಹಕರಿಸಿದ್ದ ಶುಭಂ ಮಿಥಿಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕ ಹಾಗೂ ಆತನ ತಂದೆ, ಕಾರಿನ ಮಾಲೀಕ ನಿವೃತ್ತ ಸರ್ಕಾರಿ ಅಧಿಕಾರಿ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. 

ಬಾಲಕನು ಜಿಲ್ಲೆಯ ಕಲ್ಯಾಣ್‌ ನಗರದ ಜನನಿಬಿಡ ಶಿವಾಜಿಚೌಕ್‌ನಲ್ಲಿ ಕಾರು ಚಾಲನೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಾಲತಾಣದ ರೀಲ್ಸ್‌ನಿಂದ ಪ್ರಭಾವಿತನಾಗಿದ್ದ ಬಾಲಕ, ತಂದೆಯ ಮೇಲೆ ಒತ್ತಡ ಹೇರಿ ₹ 5 ಲಕ್ಷಕ್ಕೆ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಕಾರಣವಾಗಿದ್ದು, ಲೈಸೆನ್ಸ್‌ ಇಲ್ಲದಿದ್ದರೂ ಓಡಿಸಿದ್ದ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT