ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ: ಕುತ್ತಿಗೆ ಬಿಗಿದು ಮಾನಸಿಕ ಅಸ್ವಸ್ಥ ಮಗಳ ಹತ್ಯೆ; ಪೋಷಕರ ಬಂಧನ

Published 20 ಮೇ 2024, 5:19 IST
Last Updated 20 ಮೇ 2024, 5:19 IST
ಅಕ್ಷರ ಗಾತ್ರ

ಕರೀಂನಗರ(ತೆಲಂಗಾಣ): ಮಾನಸಿಕ ಅಸ್ವಸ್ಥ ಮಗಳನ್ನು ಪೋಷಕರೇ ಕೊಂದು ಹಾಕಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಚೆಪ್ಯಾಲ ನರಸಿಂಹ(49) ಮತ್ತು ಅವರ ಪತ್ನಿ ಯಲ್ಲವ್ವ (43) ಸೇರಿಕೊಂಡು 24 ವರ್ಷದ ಮಾನಸಿಕ ಅಸ್ವಸ್ಥ ಮಗಳು ಪ್ರಿಯಾಂಕಾಳನ್ನು ಕೊಂದು ಹಾಕಿದ್ದಾರೆ ಎಂದು ರಾಜನ್ನ ಸಿರ್ಸಿಲ್ಲಾ ಎಸ್‌ಪಿ ಅಖಿಲ್ ಮಹಾಜನ್ ಹೇಳಿದ್ದಾರೆ. ಹತ್ಯೆ ಬಳಿಕ ಪೋಷಕರು ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಿದ್ದರು ಎಂದು ಅವರು ಹೇಳಿದ್ದಾರೆ.

ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಗಳಿಗೆ ಚಿಕಿತ್ಸೆ ಕೊಡಿಸಿದ್ದ ಪೋಷಕರು ಮದುವೆಯನ್ನು ಮಾಡಿಸಿದ್ದರು. ಆಕೆಗೆ 13 ತಿಂಗಳ ಮಗು ಸಹ ಇದೆ.

ಆದರೆ, ಮತ್ತೆ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆ, ಧಾರ್ಮಿಕ ಸ್ಥಳಗಳಿಗೆ ತೆರಳಿ ಸರಿಪಡಿಸುವ ಯತ್ನ ನಡೆಸಿದ್ದಾರೆ. ಆದರೆ, ಯಾವುದೇ ಉಪಯೋಗವಾಗಿಲ್ಲ.

ಈ ನಡುವೆ, ಮಗಳನ್ನು ಹತ್ಯೆ ಮಾಡಲು ನಿರ್ಧರಿಸಿದ ಪೋಷಕರು, ಮೇ 14ರಂದು ಮಲಗಿದ್ದ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳ ಸಾವಿನ ಬಗ್ಗೆ ಅಳಿಯನಿಗೆ ತಿಳಿಸಿ, ಅಂತ್ಯಸಂಸ್ಕಾರ ಸಹ ನಡೆಸಿದ್ದರು. ಈ ನಡುವೆ, ಮಹಿಳೆಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಗ್ರಾಮಸ್ಥರು, ದೂರು ನೀಡಿದ್ದರು.

ವಿಚಾರಣೆ ಸಂದರ್ಭದಲ್ಲಿ ಪೋಷಕರು ತಪ್ಪೊಪ್ಪಿಕೊಂಡಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT