ಹೈದರಾಬಾದ್:ಕೋವಿಡ್–19 ನಿಂದ ಬಳಲುತ್ತಿದ್ದ ವ್ಯಕ್ತಿಗೆ ಯಶಸ್ವಿಯಾಗಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ ಎಂದು ಹೈದರಾಬಾದ್‌ನ ಕೃಷ್ಣ ಇನ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ವೈದ್ಯರು ಹೇಳಿದ್ದಾರೆ. ಇಂಥ ಶಸ್ತ್ರಚಿಕಿತ್ಸೆ ನೆರವೇರಿಸಿರುವುದು ದೇಶದಲ್ಲಿಯೇ ಮೊದಲು ಎಂದೂ ಹೇಳಿಕೊಂಡಿದ್ದಾರೆ.

ಡಾ.ಸಂದೀಪ್ ಅತ್ತಾವರ ನೇತೃತ್ವದ ವೈದ್ಯರ ತಂಡ ಚಂಡೀಗಡ ಮೂಲದ 32 ವರ್ಷದ ವ್ಯಕ್ತಿಗೆ ಈ ಶಸ್ತ್ರಚಿಕಿತ್ಸೆ ನೆರವೇರಿಸಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

‘ಶ್ವಾಸಕೋಶ ಸಂಬಂಧಿ ಕಾಯಿಲೆ ‘ಸರ್ಕೋಯ್‌ಡೊಸಿಸ್’ ನಿಂದ ಬಳಲುತ್ತಿದ್ದ ಈ ವ್ಯಕ್ತಿಗೆ ಕೋವಿಡ್–19 ತಗುಲಿದ್ದರಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಯಿತು. ಹೀಗಾವಿ ಅವರಿಗೆ ತುರ್ತಾಗಿ ಶ್ವಾಸಕೋಶ ಕಸಿ ಮಾಡುವುದು ಅನಿವಾರ್ಯವಾಗಿತ್ತು’ ಎಂದು ಡಾ.ಅತ್ತಾವರ ತಿಳಿಸಿದರು.

ಇದನ್ನೂ ಓದಿ:ಕೋವಿಡ್–19: ವಿಶ್ವಸಂಸ್ಥೆ ನಿರ್ಣಯ ಪರ ಮತ ಚಲಾಯಿಸಿದ ಭಾರತ

‘ಮಿದುಳು ನಿಷ್ಕ್ರಿಯಗೊಂಡಿದ್ದ ಕೋಲ್ಕತ್ತ ಮೂಲದ ವ್ಯಕ್ತಿಯ ಶ್ವಾಸಕೋಶಗಳು ಲಭ್ಯ ಇರುವ ಮಾಹಿತಿ ಲಭಿಸಿತು. ಏರ್‌ಲಿಫ್ಟ್ ನೆರವಿನಿಂದ ತರಿಸಿಕೊಳ್ಳಲಾದ ಶ್ವಾಸಕೋಶಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಚಂಡೀಗಡ ಮೂಲದ ರೋಗಿಗೆ ಕಸಿ ಮಾಡಲಾಯಿತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.