ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ ಮಾಜಿ ಸ್ಪೀಕರ್, ಬಿಆರ್‌ಎಸ್‌ ಶಾಸಕ ಶ್ರೀನಿವಾಸ್ ಕಾಂಗ್ರೆಸ್‌ಗೆ ಸೇರ್ಪಡೆ

Published 21 ಜೂನ್ 2024, 13:46 IST
Last Updated 21 ಜೂನ್ 2024, 13:46 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣ ವಿಧಾನಸಭೆಯ ಮಾಜಿ ಸ್ಪೀಕರ್, ಭಾನ್ಸವಾಡಾ ಕ್ಷೇತ್ರದ ಬಿಆರ್‌ಎಸ್‌ ಶಾಸಕ ಪೊಚರಂ ಶ್ರೀನಿವಾಸ್ ರೆಡ್ಡಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮುಖ್ಯಮಂತ್ರಿ ಎ.ರೇವಂತರೆಡ್ಡಿ, ಕೃಷಿ ಸಚಿವ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಅವರು ಶಾಸಕರ ಮನೆಗೆ ಭೇಟಿ ನೀಡಿ, ಕಾಂಗ್ರೆಸ್‌ಗೆ ಸೇರುವಂತೆ ಆಹ್ವಾನಿಸಿದರು.

ಪೊಚರಂ ಶ್ರೀನಿವಾಸ ರೆಡ್ಡಿ ಅವರು ಕಾಂಗ್ರೆಸ್‌ ಸೇರುತ್ತಿರುವ ಬಿಆರ್‌ಎಸ್‌ ಪಕ್ಷದ ನಾಲ್ಕನೇ ಶಾಸಕ. ಈ ಮೊದಲು ತೆಲ್ಲಂ ವೆಂಕಟರಾವ್, ದಾನಂ ನಾಗೇಂದರ್ ಮತ್ತು ಕಡಿಯಂ ಶ್ರೀಹರಿ ಅವರು ಲೋಕಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

‘ಪೊಚರಂ ಶ್ರೀನಿವಾಸ ರೆಡ್ಡಿ ಅವರನ್ನು ರಾಜ್ಯ ನಿರ್ಮಾಣಕ್ಕೆ ಬೆಂಬಲಿಸಲು ಕೋರಿದೆ. ಅವರು ರಾಜ್ಯದ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಸೇರಿದ್ದಾರೆ. ರೈತರ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ಅವರ ಸಲಹೆ ಪಡೆಯಲಿದೆ’ ಎಂದು ಸಿ.ಎಂ ರೇವಂತರೆಡ್ಡಿ ಬಳಿಕ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT