ಹೈದರಾಬಾದ್: ಹೈದರಾಬಾದ್ನ ನಾನಾಕ್ರಮ್ಗುಡದಲ್ಲಿರುವ ಯುಎಸ್ ಕಾನ್ಸುಲೆಟ್ ಜನರಲ್ ಕಚೇರಿಯುದ್ದಕ್ಕೂ ಇರುವ ಪ್ರತಿಷ್ಠಿತ ರಸ್ತೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ.

ಈ ವಿಚಾರವನ್ನು ತಿಳಿಸುವ ಸಲುವಾಗಿ ವಿದೇಶಾಂಗ ಸಚಿವಾಲಯ ಮತ್ತು ಯುಎಸ್ ರಾಯಭಾರ ಕಚೇರಿಗೆ ಪತ್ರ ಬರೆಯಲಿದೆ.

ಇದೇ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಭಾರತ–ಅಮರಿಕ ಕಾರ್ಯತಂತ್ರದ ಪಾಲುದಾರಿಕೆ ವೇದಿಕೆ (USISPF) ಸಮಾವೇಶದಲ್ಲಿ ಮಾತನಾಡಿದ್ದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು, ಹೈದರಾಬಾದ್ನ ಪ್ರಮುಖ ರಸ್ತೆಗಳಿಗೆ ಜಾಗತಿಕ ಕಂಪನಿಗಳ ಹೆಸರಿಡುವ ಪ್ರಸ್ತಾಪ ಮಾಡಿದ್ದರು.

ರೇವಿರಿಯಾಲದಲ್ಲಿರುವ ನೆಹರೂ ಹೊರ ವರ್ತುಲ ರಸ್ತೆಯನ್ನು ಪ್ರಸ್ತಾವಿತ ರೇಡಿಯಲ್ ವರ್ತುಲ ರಸ್ತೆ (ಆರ್ಆರ್ಆರ್) ಜೊತೆ ಸಂಪರ್ಕಿಸುವ ಗ್ರೀನ್ಫೀಲ್ಡ್ ರೇಡಿಯಲ್ ರಸ್ತೆಗೆ ಪದ್ಮ ಭೂಷ ರತನ್ ಟಾಟಾ ಅವರ ಹೆಸರಿಡಲು ಹಾಗೂ ರೇವಿರಿಯಾಲ ಇಂಟರ್ಚೇಂಜ್ ರಸ್ತೆಗೆ 'ಟಾಟಾ ಇಂಟರ್ಚೇಂಜ್' ಎಂದು ಹೆಸರಿಸುವ ನಿರ್ಧಾರ ಮಾಡಲಾಗಿದೆ.

ಇಷ್ಟೇ ಅಲ್ಲದೆ, ಗೂಗಲ್ ಮ್ಯಾಪ್ ಕೊಡುಗೆಯನ್ನು ಗುರುತಿಸಿ, ಪ್ರಮುಖ ಪ್ರದೇಶಕ್ಕೆ 'ಗೂಗಲ್ ಸ್ಟ್ರೀಟ್' ಎಂದು ಕರೆಯಲು ನಿರ್ಧರಿಸಿದೆ.

ಈ ಪ್ರಸ್ತಾವನೆಗಳ ಮೂಲಕ ತೆಲಂಗಾಣವನ್ನು, ನಾವಿನ್ಯತೆಗೆ ಒತ್ತು ನೀಡುವ ಭಾರತದ ಹೆಗ್ಗುರುತಾಗಿಸುವ ಪ್ರಯತ್ನದ ಭಾಗವಾಗಿದೆ.

ಇವುಗಳ ಜೊತೆಗೆ ಗಣ್ಯರ ಹೆಸರುಗಳನ್ನು ಮತ್ತಷ್ಟು ರಸ್ತೆಗಳಿಗೆ ಇಡುವ ಆಲೋಚನೆಯೂ ಸರ್ಕಾರದ ಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.