ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದ ಜನರು 10 ವರ್ಷಗಳ ದುರಾಡಳಿತದಿಂದ ಸ್ವತಂತ್ರಗೊಂಡಿದ್ದಾರೆ: ರಾಜ್ಯಪಾಲೆ

Published 15 ಡಿಸೆಂಬರ್ 2023, 12:37 IST
Last Updated 15 ಡಿಸೆಂಬರ್ 2023, 12:37 IST
ಅಕ್ಷರ ಗಾತ್ರ

ಹೈದರಾಬಾದ್: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ತೀರ್ಪು ನೀಡುವ ಮೂಲಕ, 10 ವರ್ಷಗಳ ದುರಾಡಳಿತದಿಂದ ತೆಲಂಗಾಣದ ಮತದಾರರು ತಮ್ಮನ್ನು ತಾವು ಸ್ವತಂತ್ರಗೊಳಿಸಿಕೊಂಡಿದ್ದಾರೆ ಎಂದು ರಾಜ್ಯಪಾಲರಾದ ತಮಿಳಿಸೈ ಸೌಂದರ್ಯರಾಜನ್‌ ಹೇಳಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದ ಮೊದಲ ದಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ತೆಲಂಗಾಣದ ಪ್ರಗತಿಗೆ ಹೊಸ ಪ್ರಾರಂಭ ನೀಡಿದ 2023ನೇ ಇಸವಿಯು ಇತಿಹಾಸದಲ್ಲಿ ಉಳಿಯಲಿದೆ. ಜನ ಈಗಾಗಲೇ ಬದಲಾವಣೆಯನ್ನು ಅನುಭವಿಸುತ್ತಿದ್ದಾರೆ. ತೆಲಂಗಾಣ ಈಗ ಸ್ವಾತಂತ್ರ್ಯದ ತಾಜಾ ಗಾಳಿಯನ್ನು ಉಸಿರಾಡುತ್ತಿದೆ. ತೆಲಂಗಾಣವು ನಿರಂಕುಶ ಆಡಳಿತ ಮತ್ತು ಸರ್ವಾಧಿಕಾರಿ ಧೋರಣೆಗಳಿಂದ ವಿಮೋಚನೆಗೊಂಡಿದೆ’ ಎಂದು ಹೇಳಿದ್ದಾರೆ.

‘ಸದ್ಯ ಆಯ್ಕೆಯಾಗಿರುವ ಸರ್ಕಾರವು ಎಲ್ಲಾ ಜನರಿಗೆ, ಪಕ್ಷಗಳಿಗೆ, 2014ರಲ್ಲಿ ಪ್ರತ್ಯೇಕ ತೆಲಂಗಾಣ ರಚಿಸಿದ್ದಕ್ಕಾಗಿ ಆಗಿನ ಯುಪಿಎ ಸರ್ಕಾರಕ್ಕೆ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸುತ್ತದೆ’ ಎಂದು ಹೇಳಿದ್ದಾರೆ.

ನಾಲ್ಕು ಕೋಟಿ ತೆಲಂಗಾಣ ಜನರ ಪರವಾಗಿ, ತೆಲಂಗಾಣ ರಾಜ್ಯ ರಚಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಸರ್ಕಾರ ಧನ್ಯವಾದ ಅರ್ಪಿಸುತ್ತದೆ’ ಎಂದು ನುಡಿದಿದ್ದಾರೆ.

ಇದೇ ವೇಳೆ ತೆಲಂಗಾಣ ರಾಜ್ಯ ರಚನೆ ಹೋರಾಟದಲ್ಲಿ ಮಡಿದವರಿಗೆ ರಾಜ್ಯಪಾಲರು ಶ್ರದ್ಧಾಂಜಲಿ ಅರ್ಪಿಸಿದರು.

ಹಿಂದಿನ ಸರ್ಕಾರದ ಕೆಟ್ಟ ಆಡಳಿತದಿಂದಾಗಿ ರಾಜ್ಯದ ಹಣಕಾಸು ಸ್ಥಿತಿ ಹಾಳಾಗಿದೆ. ಹಳಿತಪ್ಪಿದ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವತ್ತ ಸರ್ಕಾರ ಗಮನಹರಿಸಿದೆ. ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರತಿಯೊಂದು ಇಲಾಖೆಯ ಆರ್ಥಿಕ ಸ್ಥಿತಿಗತಿಯನ್ನು ಜನರ ಮುಂದೆ ಇಡುತ್ತೇವೆ. ವಾಸ್ತವ ಸಂಗತಿಗಳನ್ನು ಅವರಿಗೆ ತೋರಿಸುತ್ತೇವೆ. ನಾವು ಶ್ವೇತಪತ್ರಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT