ಹನುಮಗೊಂಡದಲ್ಲಿ 300 ನಾಯಿ ಹತ್ಯೆ!
ಹನುಮಗೊಂಡ ಜಿಲ್ಲೆಯ ಶಾಯಂಪೇಟ್ ಹಾಗೂ ಅರೆಪಲ್ಲಿ ಗ್ರಾಮಗಳಲ್ಲಿ ಜನವರಿ 6ರ ನಂತರ ಮೂರು ದಿನಗಳ ಅಂತರದಲ್ಲಿ 300 ಬೀದಿನಾಯಿಗಳನ್ನು ಕೊಲ್ಲಲಾಗಿತ್ತು. ಆ ಸಂಬಂಧ, ಸರಪಂಚ್‌ಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಇಂಜೆಕ್ಷನ್ ನೀಡಲು ನಿಯೋಜನೆಗೊಂಡಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಪಟ್ಟಿಯಲ್ಲಿ ಇಬ್ಬರು ಮಹಿಳೆಯರೂ ಇದ್ದಾರೆ.