ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

Published 10 ಮೇ 2024, 0:23 IST
Last Updated 10 ಮೇ 2024, 0:23 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌–ಕಣಗಿಲು ಜಾತಿಗೆ ಸೇರಿದ ಹೂವು) ಬಳಸುವುದನ್ನು ನಿಲ್ಲಿಸಲು ತೀರ್ಮಾನಿಸಿದೆ.

ಈ ಹೂವು ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಹಾನಿಕಾರವಾದ ಕಾರಣ ಈ ನಿರ್ಧಾರ ಕೈಗೊಂಡಿದೆ.

ಮಂಡಳಿಯ ಅಧ್ಯಕ್ಷ ಪಿ.ಎಸ್.ಪ್ರಶಾಂತ್‌, ‘ಪೂಜೆ ಮತ್ತು ನೈವೇದ್ಯದಲ್ಲಿ ಅರಳಿ ಹೂವುಗಳ ಬಳಕೆಯನ್ನು ಸಂಪುರ್ಣವಾಗಿ ನಿಲ್ಲಿಸಲು ನಿರ್ಧರಿಸಿದ್ದೇವೆ. ಇವುಗಳ ಬದಲಾಗಿ ತುಳಸಿ, ಮಲ್ಲಿಗೆ, ದಾಸವಾಳ, ಗುಲಾಬಿ ಮತ್ತಿರ ಹೂವುಗಳನ್ನು ಬಳಸುತ್ತೇವೆ’ ಎಂದು ತಿಳಿಸಿದರು.

ಅಲಪ್ಪುಳ ಮತ್ತು ಪತ್ತನಂತಿಟ್ಟಂನಲ್ಲಿ ಈ ಹೂವುಗಳ ಸೇವನೆಯಿಂದ ಮಹಿಳೆ ಮತ್ತು ಗೋವುಗಳು ಸಾವಿಗೀಡಾದ ಬಗ್ಗೆ ವರದಿಯಾದ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT