ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆಯ ದಾಳಿ ಸಾಮರ್ಥ್ಯ ಅನಾವರಣ

ಫೋಖರಣ್‌ ಮರುಭೂಮಿಯಲ್ಲಿ ‘ವಾಯು ಶಕ್ತಿ 2024’ ಸಮರಾಭ್ಯಾಸ
Published 17 ಫೆಬ್ರುವರಿ 2024, 16:35 IST
Last Updated 17 ಫೆಬ್ರುವರಿ 2024, 16:35 IST
ಅಕ್ಷರ ಗಾತ್ರ

ಪೋಖರಣ್(ರಾಜಸ್ಥಾನ): ಮರುಭೂಮಿಯಿಂದ ಕೂಡಿದ ಈ ಪ್ರದೇಶದ ಆಗಸವು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಸಾಮರ್ಥ್ಯ ಪರೀಕ್ಷೆ–ಪ್ರದರ್ಶನದ ಅಂಗಳವೇ ಆಗಿತ್ತು. ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧವಿಮಾನ ರಫೇಲ್‌ನಿಂದ ವಿಶಾಲ ವ್ಯಾಪ್ತಿ ಸಾಮರ್ಥ್ಯದ ‘ಎಂಐಸಿಎ’ ಕ್ಷಿಪಣಿ ಚಿಮ್ಮಿದರೆ, ಮತ್ತೊಂದು ಯುದ್ಧವಿಮಾನ ‘ಅಪಾಚೆ’ಯಿಂದ ‘ಹೆಲ್‌ಫೈರ್‌’ ಕ್ಷಿಪಣಿಗಳು ಬಾನಂಗಳದಲ್ಲಿ ಶನಿವಾರ ಗರ್ಜಿಸಿದವು.

‘ವಾಯು ಶಕ್ತಿ 2024’ ಹೆಸರಿನ ತಾಲೀಮಿನ ಮೂಲಕ, ವಾಯುಪಡೆಯ ಮಾರಕ ಮತ್ತು ನಿಖರ ದಾಳಿ ಸಾಮರ್ಥ್ಯ ಅನಾವರಣಗೊಂಡಿತು.

ರಫೇಲ್‌ ಹಾಗೂ ಅಪಾಚೆ ಯುದ್ಧವಿಮಾನಗಳಿಂದ ಚಿಮ್ಮಿದ ಕ್ಷಿಪಣಿಗಳು ದೃಷ್ಟಿಗೆ ಗೋಚರವಾಗದಷ್ಟು ದೂರಕ್ಕೆ ಮಿಂಚಿನ ವೇಗದಲ್ಲಿ ಸಾಗಿ, ನಿರ್ದಿಷ್ಟ ಗುರಿಯನ್ನು ನಾಶಪಡಿಸುವ ಕ್ಷಮತೆ ಹೊಂದಿವೆ.  

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಈ ಸಮರಾಭ್ಯಾಸದಲ್ಲಿ 77 ಫೈಟರ್‌ಗಳು ಸೇರಿದಂತೆ 120 ಯುದ್ಧವಿಮಾನಗಳ ಶಕ್ತಿ ಪ್ರದರ್ಶನಕ್ಕೆ ಸಿಡಿಎಸ್‌ ಜನರಲ್ ಅನಿಲ್‌ ಚೌಹಾಣ್‌ ಹಾಗೂ ಇತರ ಸೇನಾಧಿಕಾರಿಗಳು ಸಾಕ್ಷಿಯಾದರು. 

ಯುದ್ಧವಿಮಾನಗಳಾದ ರಫೇಲ್‌, ತೇಜಸ್, ಸು–30ಎಂಕೆಐ, ಮಿಗ್–29, ಜಾಗ್ವಾರ್‌ ಹಾಗೂ ಚಿನೂಕ್‌ ಹೆಲಿಕಾಪ್ಟರ್‌ಗಳಿಂದಲೂ ತಾಲೀಮು ನಡೆಯಿತು.

ಉಗ್ರರ ಅಡಗುತಾಣಗಳ ಮೇಲೆ ವಾಯುಪಡೆಯ ಗರುಡ ಕಮಾಂಡೋಗಳು ಕ್ಷಿಪ್ರವಾಗಿ ಎರಗಿ, ಅವರನ್ನು ಹೊಡೆದುರುಳಿಸುವ ಕಾರ್ಯಾಚರಣೆಯ ತಾಲೀಮು ಸಹ ನಡೆಯಿತು.

ಲಘು ಯುದ್ಧ ಹೆಲಕಾಪ್ಟರ್‌ ‘ಪ್ರಚಂಡ’ವನ್ನು ಬಳಸಿ ರಾತ್ರಿ ವೇಳೆ ನಡೆಸುವ ಕಾರ್ಯಾಚರಣೆಯನ್ನು ಇದೇ ಮೊದಲ ಬಾರಿಗೆ ಪ್ರದರ್ಶಿಸಿದ್ದು ವಿಶೇಷ.

ರಾಜಸ್ಥಾನದ ಪೋಖರಣ್‌ ಪರೀಕ್ಷಾ ವಲಯದಲ್ಲಿ ವಾಯುಪಡೆಯು ಶನಿವಾರ ಹಮ್ಮಿಕೊಂಡಿದ್ದ ಸಮರಾಭ್ಯಾಸ ‘ವಾಯು ಶಕ್ತಿ’ ಅಂಗವಾಗಿ ಶಕ್ತಿಶಾಲಿ ಕ್ಷಿಪಣಿಯನ್ನು ಹಾರಿಸಲಾಯಿತು   –ಪಿಟಿಐ ಚಿತ್ರ 
ರಾಜಸ್ಥಾನದ ಪೋಖರಣ್‌ ಪರೀಕ್ಷಾ ವಲಯದಲ್ಲಿ ವಾಯುಪಡೆಯು ಶನಿವಾರ ಹಮ್ಮಿಕೊಂಡಿದ್ದ ಸಮರಾಭ್ಯಾಸ ‘ವಾಯು ಶಕ್ತಿ’ ಅಂಗವಾಗಿ ಶಕ್ತಿಶಾಲಿ ಕ್ಷಿಪಣಿಯನ್ನು ಹಾರಿಸಲಾಯಿತು   –ಪಿಟಿಐ ಚಿತ್ರ 
ವಾಯುಪಡೆಯ ಹೆಲಿಕಾಪ್ಟರ್‌ ಬಳಸಿ ನಡೆಸಿದ ದಾಳಿಯ ತಾಲೀಮಿನ ದೃಶ್ಯ –ಪಿಟಿಐ ಚಿತ್ರ 
ವಾಯುಪಡೆಯ ಹೆಲಿಕಾಪ್ಟರ್‌ ಬಳಸಿ ನಡೆಸಿದ ದಾಳಿಯ ತಾಲೀಮಿನ ದೃಶ್ಯ –ಪಿಟಿಐ ಚಿತ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT