ನವದೆಹಲಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ ಭಾರತೀಯರನ್ನು ಗಡೀಪಾರು ಮಾಡುತ್ತಿರುವುದರ ಕುರಿತು ಕೋಲಾಹಲ ಎದ್ದಿದೆ. ಅದರಲ್ಲೂ ಕೈಗೆ ಕೋಳ ತೊಡಿಸಿ, ಕಾಲಿಗೆ ಕಬ್ಬಿಣದ ಸಂಕೋಲೆ ಹಾಕಿ ಕಳುಹಿಸಿರುವುದು ಭಾರಿ ಆಕ್ರೋಶಕ್ಕೆ ಎಡೆಮಾಡಿದೆ.

ಈ ನಡುವೆ, ವರದಿಗಳ ಪ್ರಕಾರ, ಅಮೆರಿಕದಲ್ಲಿ 6,75,000 ಭಾರತೀಯ ಅಕ್ರಮ ವಲಸಿಗರಿದ್ದಾರೆ. ಈ ಪೈಕಿ 18,000 ಮಂದಿ ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ಎಐಎಂಐಎಂ ಪಕ್ಗದ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
.ಅಮೆರಿಕದಿಂದ ಗಡೀಪಾರಾಗಿ ಬಂದ ಗುಜರಾತ್ನ ಖುಷ್ಬೂ: ಪೋಷಕರು ಹೇಳಿದ್ದೇನು?.
‘2022ರ ಪ್ಯೂ ರಿಸರ್ಚ್ ವರದಿಯ ಪ್ರಕಾರ, ಅಮೆರಿಕದಲ್ಲಿ ಇನ್ನೂ 6,75,000 ದಾಖಲೆರಹಿತ ಭಾರತೀಯ ವಲಸಿಗರು ಇದ್ದಾರೆ ಮತ್ತು 18,000 ಜನರು ಅಂತಿಮ ಪಟ್ಟಿಯಲ್ಲಿದ್ದಾರೆ. ಈ ಎಲ್ಲ ಜನರು ಹಿಂದಿರುಗಿದಾಗ ಸರ್ಕಾರವು ಅವರಿಗೆ ಯಾವ ಮಾರ್ಗ ತೋರಲಿದೆ ಎಂಬುದನ್ನು ತಿಳಿಸಬೇಕು’ಎಂದು ಓವೈಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಮೋದಿ ಜಿ ಭಾರತದ ಹೆಸರನ್ನು ಎತ್ತರಕ್ಕೆ ಏರಿಸಿದ್ದಾರೆ. ಭಾರತವನ್ನು ಸೂಪರ್ ಪವರ್ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಲೇ ಇರುತ್ತಾರೆ. ಆದರೆ, ಈಗ ಏನಾಗುತ್ತಿದೆ? ಭಾರತೀಯರನ್ನು ಏಕೆ ಅಮೆರಿಕ ಅಗೌರವದಿಂದ ನಡೆಸಿಕೊಂಡಿದೆ?’ಎಂದು ಪ್ರಶ್ನಿಸಿದ್ದಾರೆ.

ಈ ಘಟನೆಯು ಭಾರತದ ಯುವಜನರಲ್ಲಿ ನಿರುದ್ಯೋಗದ ಮಟ್ಟವನ್ನು ಪ್ರತಿಬಿಂಬಿಸಿದೆ ಎಂದು ಎಐಎಂಐಎಂ ವರಿಷ್ಠರು ಹೇಳಿದ್ದಾರೆ.

‘ಇದು ಭಾರತದ ಯುವಜನರಲ್ಲಿ ನಿರುದ್ಯೋಗದ ಮಟ್ಟವನ್ನು ಪ್ರತಿಬಿಂಬಿಸುತ್ತದೆ. ದೇಶದಲ್ಲಿ ಶೇಕಡ 45ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಈ ಕಾರಣಕ್ಕಾಗಿಯೇ ಏಜೆಂಟರಿಂದ ಆಮಿಷಕ್ಕೆ ಒಳಗಾಗುತ್ತಾರೆ. ಕಷ್ಟಗಳನ್ನು ಸಹಿಸಿಕೊಳ್ಳುತ್ತಾರೆ ಮತ್ತು ಅಮೆರಿಕ ತಲುಪಲು 8-10 ದೇಶಗಳನ್ನು ದಾಟುತ್ತಾರೆ. ಇಷ್ಟೊಂದು ನಿರುದ್ಯೋಗ ಏಕೆ ಇದೆ ಎಂದು ಸರ್ಕಾರ ಉತ್ತರಿಸಬೇಕು’ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
.ಅಕ್ರಮ ವಲಸಿಗರ ವಿರುದ್ಧ ಅಮೆರಿಕ ಕ್ರಮ: 104 ಮಂದಿ ಭಾರತೀಯರು ಸ್ವದೇಶಕ್ಕೆ ವಾಪಸ್.ಅಕ್ರಮವಾಗಿ ನೆಲೆಸಿದ್ದ ಏಲಿಯನ್ಗಳನ್ನು ಭಾರತಕ್ಕೆ ಕಳುಹಿಸಲಾಗಿದೆ: USBP ಅಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.