ಗುವಹಾಟಿ: ಮನೆಯೊಂದರಲ್ಲಿ ಕಳ್ಳತನ ಮಾಡಿದ ಬಳಿಕ ಖಿಚಡಿ ತಯಾರಿಸಲು ಹೋಗಿ ಕಳ್ಳನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ಅಸ್ಸಾಂ ಪೊಲೀಸರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದರೆ ಕಳ್ಳನ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ರಾತ್ರಿ ವೇಳೆ ಯಾರು ಇಲ್ಲದ ಮನೆಗೆ ಕಳ್ಳನೊಬ್ಬ ನುಗಿದ್ದ. ಬೆಲೆ ಬಾಳುವ ವಸ್ತುಗಳನ್ನು ಕದ್ದು ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ. ಮನೆಯಲ್ಲಿ ಯಾರು ಇಲ್ಲವಾದ್ದರಿಂದ ಖಿಚಡಿ ತಯಾರಿಸುತ್ತಿದ್ದ.
ಯಾರು ಇಲ್ಲದ ಮನೆಯಲ್ಲಿ ಅಡುಗೆ ಮಾಡುವ ಸದ್ದು ಕೇಳಿದ ನೆರಹೊರೆಯವರು ತಕ್ಷಣವೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ತಕ್ಷಣ ಸ್ಥಳಕ್ಕೆ ಆಗಮಿದ ಪೊಲೀಸರು ಕಳ್ಳನನ್ನು ಹಿಡಿದಿದ್ದಾರೆ.
ನಂತರ ಪೊಲೀಸರು ಟ್ವಿಟರ್ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದರು. ವ್ಯಾಪಕವಾಗಿ ಹರಿದಾಡುತ್ತಿರುವ ಈ ಪೋಸ್ಟ್ಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ಗಳನ್ನು ಹಾಕುತ್ತಿದ್ದಾರೆ.
The curious case of a cereal burglar!
Despite its many health benefits, turns out, cooking Khichdi during a burglary attempt can be injurious to your well being.