ನವದೆಹಲಿ: ದೇಶದ ವನ್ಯಜೀವಿ ಸಂರಕ್ಷಕರ ಪೈಕಿ ಪ್ರಮುಖರಾದ ವಾಲ್ಮೀಕ್ ಥಾಪರ್ ಅವರು (73) ತಮ್ಮ ನಿವಾಸದಲ್ಲಿ ಶನಿವಾರ ಬೆಳಿಗ್ಗೆ ನಿಧನರಾದರು. ಅವರು ಲೇಖಕರಾಗಿಯೂ ಚಿರಪರಿಚಿತರು.

1952ರಲ್ಲಿ ದೆಹಲಿಯಲ್ಲಿ ಜನಿಸಿದ ಥಾಪರ್ ಅವರು ತಮ್ಮ ಜೀವನವನ್ನು ಹುಲಿಗಳ ಸಂರಕ್ಷಣೆಗೆ, ಅವುಗಳ ಕುರಿತ ಅಧ್ಯಯನಕ್ಕೆ ಮುಡಿಪಾಗಿಟ್ಟರು. ಅದರಲ್ಲೂ ಮುಖ್ಯವಾಗಿ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿನ ಹುಲಿಗಳ ಬಗ್ಗೆ ಅವರು ಹೆಚ್ಚು ಗಮನಹರಿಸಿದ್ದರು.

ಸಮುದಾಯಗಳನ್ನು ಜೊತೆಯಾಗಿಸಿಕೊಂಡು ಸಂರಕ್ಷಣೆಗೆ ಗಮನ ನೀಡುವ ಸರ್ಕಾರೇತರ ಸಂಘಟನೆ ‘ರಣಥಂಭೋರ್ ಪ್ರತಿಷ್ಠಾನ’ವನ್ನು ಥಾಪರ್ ಅವರು ಇತರರ ಜೊತೆಯಾಗಿ 1988ರಲ್ಲಿ ಆರಂಭಿಸಿದರು.

ಥಾಪರ್ ಅವರ ನಿಧನವು ಬಹಳ ದೊಡ್ಡ ನಷ್ಟ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ‘ಥಾಪರ್ ಅವರಲ್ಲಿನ ಅವಿರತವಾದ ಉತ್ಸಾಹಕ್ಕೆ, ಆಳವಾದ ಬದ್ಧತೆಗೆ ಇಂದಿನ ರಣಥಂಬೋರ್ ಒಳ್ಳೆಯ ಉದಾಹರಣೆ. ಜೀವವೈವಿಧ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಅವರು ಅಸಾಮಾನ್ಯ ಜ್ಞಾನ ಹೊಂದಿದ್ದರು. ನಾನು ಸಚಿವನಾಗಿದ್ದ ಅವಧಿಯಲ್ಲಿ ನಾವು ಪರಸ್ಪರ ಮಾತನಾಡದ ಒಂದು ದಿನವೂ ಇಲ್ಲ, ಬಹುತೇಕ ಸಂದರ್ಭಗಳಲ್ಲಿ ನಾನು ಕೇಳುಗನಾಗಿರುತ್ತಿದ್ದೆ’ ಎಂದು ರಮೇಶ್ ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಸ್ಥಾಯಿ ಸಮಿತಿಯೊಂದಕ್ಕೆ ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಥಾಪರ್ ಅವರು ಅಮೂಲ್ಯವಾದ ಸಲಹೆಗಳನ್ನು ನಿರಂತರವಾಗಿ ಕೊಡುತ್ತಿದ್ದರು ಎಂದು ರಮೇಶ್ ನೆನಪಿಸಿಕೊಂಡಿದ್ದಾರೆ. ಥಾಪರ್ ಅವರ ತಂದೆ ರೋಮೇಶ್ ಥಾಪರ್ ಅವರು ಬಹುಶ್ರುತ ಪತ್ರಕರ್ತರು. ಇತಿಹಾಸ ತಜ್ಞೆ ರೋಮಿಲಾ ಥಾಪರ್, ಪತ್ರಕರ್ತ ಕರಣ್ ಥಾಪರ್ ಅವರು ಇವರ ಸಂಬಂಧಿಕರು.

ದಿ ಡೂನ್ ಸ್ಕೂಲ್ನಲ್ಲಿ ಶಿಕ್ಷಣ ಪಡೆದ ಥಾಪರ್ ನಂತರ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಸಮಾಜಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ನಟ ಶಶಿ ಕಪೂರ್ ಅವರ ಮಗಳು, ರಂಗಭೂಮಿ ಕಲಾವಿದೆ ಸಂಜನಾ ಕಪೂರ್ ಅವರನ್ನು ಮದುವೆಯಾಗಿದ್ದ ಥಾಪರ್ ಅವರಿಗೆ ಒಬ್ಬ ಮಗ ಇದ್ದಾನೆ.

ದೇಶದ ಹೆಸರಾಂತ ವನ್ಯಜೀವಿ ಸಂರಕ್ಷಕ ಫತೇಹ್ ಸಿಂಗ್ ರಾಥೋರ್ ಅವರು ಥಾಪರ್ ಅವರಿಗೆ ಮಾರ್ಗದರ್ಶಕರಾಗಿದ್ದರು. ಕಳ್ಳಬೇಟೆ ತಡೆಯಲು ಕಠಿಣ ಕಾನೂನು ಬೇಕು ಎಂಬುದರ ಪರವಾಗಿ ಥಾಪರ್ ಅವರು ಐದು ದಶಕಗಳ ತಮ್ಮ ವೃತ್ತಿಬದುಕಿನ ಉದ್ದಕ್ಕೂ ಬಲವಾಗಿ ಲಾಬಿ ನಡೆಸಿದ್ದರು, ಹುಲಿಗಳ ಆವಾಸ ಸ್ಥಾನಗಳನ್ನು ರಕ್ಷಿಸುವ ಪ್ರಯತ್ನ ನಡೆಯಬೇಕು ಎಂದು ಹೇಳುತ್ತಿದ್ದರು.

ವಸಾಹತು ನಂತರದ ಕಾಲಘಟ್ಟದ ನನ್ನ ತಲೆಮಾರಿನ ವನ್ಯಜೀವಿ ಸಂರಕ್ಷಕರ ಪೈಕಿ ವಾಲ್ಮೀಕ್ ಥಾಪರ್ ಅವರು ಅತ್ಯಂತ ಪರಿಣಾಮಕಾರಿ ಹಾಗೂ ನಿಜವಾದ ನಾಯಕರಾಗಿ ಎತ್ತರದ ಸ್ಥಾನ ಹೊಂದಿದ್ದರು.
–ಕೆ. ಉಲ್ಲಾಸ ಕಾರಂತ, ವನ್ಯಜೀವಿ ತಜ್ಞ

ಪ್ರಧಾನಿ ನೇತೃತ್ವದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸದಸ್ಯರಾಗಿ, ಸರ್ಕಾರದ 150ಕ್ಕೂ ಹೆಚ್ಚು ಕಾರ್ಯಪಡೆಗಳಲ್ಲಿ, ಸಮಿತಿಗಳಲ್ಲಿ ಸದಸ್ಯರಾಗಿ ಥಾಪರ್ ಕೆಲಸ ಮಾಡಿದ್ದಾರೆ.

ಯುಪಿಎ ಸರ್ಕಾರವು 2005ರಲ್ಲಿ ಹುಲಿ ಕಾರ್ಯಪಡೆಯನ್ನು ರಚಿಸಿತು, ಥಾಪರ್ ಅದರ ಸದಸ್ಯರಾಗಿದ್ದರು. ಕಾರ್ಯಪಡೆಯ ಅಧ್ಯಕ್ಷೆ ಸುನೀತಾ ನಾರಾಯಣ್ ಅವರು ವರದಿಯನ್ನು ಸಲ್ಲಿಸಿದಾಗ ಥಾಪರ್ ಅವರು ಭಿನ್ನಮತದ ಟಿಪ್ಪಣಿಯೊಂದನ್ನು ಸಲ್ಲಿಸಿದ್ದರು.

ಹುಲಿಗಳು ಮತ್ತು ಮನುಷ್ಯರು ಒಂದೇ ಪ್ರದೇಶದಲ್ಲಿ ವಾಸಿಸಬಹುದು ಎಂಬ ವಿಚಾರದಲ್ಲಿ ವರದಿಯು ಬಹಳ ಆಶಾದಾಯಕವಾದ ಚಿತ್ರಣ ನೀಡುತ್ತದೆ ಎಂದು ಥಾಪರ್ ಕಳವಳ ವ್ಯಕ್ತಪಡಿಸಿದ್ದರು. ದೀರ್ಘಾವಧಿಯಲ್ಲಿ ಹುಲಿಗಳು ಬದುಕುಳಿಯಬೇಕು ಎಂದಾದರೆ ಕೆಲವು ಪ್ರದೇಶಗಳನ್ನು ಮನುಷ್ಯನ ಹಸ್ತಕ್ಷೇಪದಿಂದ ಮುಕ್ತವಾಗಿ ಇರಿಸಬೇಕು ಎಂದು ಥಾಪರ್ ವಾದಿಸಿದ್ದರು. ಕನಿಷ್ಠಪಕ್ಷ ಕೆಲವು ಪ್ರದೇಶಗಳನ್ನು ಸಹಜ ರೂಪದಲ್ಲಿ ಹುಲಿಗಳಿಗಾಗಿ ಮೀಸಲಿಡಬೇಕು ಎಂದು ಹೇಳಿದ್ದರು. ಅವರು ರಚಿಸಿರುವ, ಸಂಪಾದಿಸಿರುವ ಕೃತಿಗಳ ಸಂಖ್ಯೆ 30ಕ್ಕೂ ಹೆಚ್ಚು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.