ಮರಾಠವಾಡದಲ್ಲಿ ನಾಲ್ಕನೇ ಹುಲಿ...
‘ರಾಮಲಿಂಗ್’ ಮರಾಠವಾಡದಲ್ಲಿ ಕಾಣಿಸಿಕೊಂಡ ನಾಲ್ಕನೇ ಹುಲಿ. ಗೌತಲಾ ವನ್ಯಜೀವಿ ಅಭಯಾರಣ್ಯದಲ್ಲಿ 1971ರಲ್ಲಿ ಕಾಣಿಸಿಕೊಂಡಿದ್ದ ಹುಲಿಯೇ ಪ್ರಥಮ ಹಾಗೂ ಕೊನೆಯದಾಗಿತ್ತು. 2020ರವರೆಗೂ ಇನ್ನೊಂದು ಹುಲಿ ಕಾಣಿಸಿಕೊಂಡಿರಲಿಲ್ಲ. ಮರಾಠವಾಡದ ನಾಂದೇಡ್ ಹಾಗೂ ವಿದರ್ಭದ ತಿಪ್ಪೇಶ್ವರ ವನ್ಯಜೀವಿ ಅಭಯಾರಣ್ಯದ ನಡುವೆ ಪ್ರಸ್ತುತ ಎರಡು ಹುಲಿ ಸಂಚರಿಸುತ್ತಿವೆ. ಇದು ಈ ಭಾಗದಲ್ಲಿರುವ ಕಾಡಿನ ಆರೋಗ್ಯದ ಸಂಕೇತವಾಗಿದೆ ಎನ್ನುತ್ತಾರೆ ಮುಂಡೆ. ‘ಬೆಳೆ ರಕ್ಷಣೆಗಾಗಿ ರೈತರು ಅಳವಡಿಸಿಕೊಂಡಿರುವ ಕಡಿಮೆ ತೀವ್ರತೆಯ ವಿದ್ಯುತ್ ತಂತಿ ಬೇಲಿ ಹೊರತುಪಡಿಸಿ ಇನ್ಯಾವುದೇ ರೀತಿಯ ಅಪಾಯ ಈ ಹುಲಿಗಳಿಗಿಲ್ಲ. ‘ರಾಮಲಿಂಗ್’ನ ಮೇಲ್ವಿಚಾರಣೆಗಾಗಿ ಗಸ್ತು ತಂಡಗಳನ್ನು ರಚಿಸಲಾಗಿದೆ’ ಎಂದು ಅವರು ತಿಳಿಸಿದರು.