ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 9 ಅಕ್ಟೋಬರ್‌ 2023

Published 9 ಅಕ್ಟೋಬರ್ 2023, 13:28 IST
Last Updated 9 ಅಕ್ಟೋಬರ್ 2023, 13:28 IST
ಅಕ್ಷರ ಗಾತ್ರ
Introduction

ಐದು ರಾಜ್ಯಗಳಿಗೆ ಚುನಾವಣೆ ಘೋಷಣೆ: ವೇಳಾಪಟ್ಟಿ ಹೀಗಿದೆ..,ಕಾವೇರಿ ನೀರು ಬಿಡುವಂತೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ನಿಳುವಳಿ ಮಂಡನೆ, ಹೊಸಪೇಟೆ ಸಮೀಪ ಗುಂಡಾ ಅರಣ್ಯ ಬಳಿ ಕಾರು ಲಾರಿಗಳ ಭೀಕರ ಅಪಘಾತ: 7 ಜನ ಸಾವು, ಅಮೆರಿಕದ ಕ್ಲೌಡಿಯಾ ಗೋಲ್ಡಿನ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್ ಸೇರಿದಂತೆ ಈ ದಿನ ಪ್ರಮುಖ ಸುದ್ದಿಗಳು ಇಲ್ಲಿವೆ..

1

ಐದು ರಾಜ್ಯಗಳಿಗೆ ಚುನಾವಣೆ ಘೋಷಣೆ: ವೇಳಾಪಟ್ಟಿ ಹೀಗಿದೆ..

ಐದು ರಾಜ್ಯಗಳ ವಿಧಾನಸಭೆಗೆ ನಡೆಯುವ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಇಂದು (ಅ.9) ಪ್ರಕಟಿಸಿತು. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದರು.

ಈ ಸುದ್ದಿಯನ್ನು ಪೂರ್ಣ ಓದಿ: ಐದು ರಾಜ್ಯಗಳಿಗೆ ಚುನಾವಣೆ ಘೋಷಣೆ: ವೇಳಾಪಟ್ಟಿ ಹೀಗಿದೆ..

2

ಕಾವೇರಿ ನೀರು ಬಿಡುವಂತೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ನಿಳುವಳಿ ಮಂಡನೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಕಾವೇರಿ ನೀರು ಬಿಡಲು ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ವಿಧಾನಸಭೆಯಲ್ಲಿ ಇಂದು (ಸೋಮವಾರ) ನಿಲುವಳಿ ಮಂಡಿಸಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಕಾವೇರಿ ನೀರು ಬಿಡುವಂತೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ನಿಳುವಳಿ ಮಂಡನೆ

3

ಹೊಸಪೇಟೆ ಸಮೀಪ ಗುಂಡಾ ಅರಣ್ಯ ಬಳಿ ಕಾರು ಲಾರಿಗಳ ಭೀಕರ ಅಪಘಾತ: 7 ಜನ ಸಾವು

ಹೊಸಪೇಟೆಸಮೀಪದ ಗುಂಡಾ ಅರಣ್ಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ಸ್ಟಿಯರಿಂಗ್ ವೀಲ್‌ ತುಂಡಾಗಿ ಇನ್ನೊಂದು ರಸ್ತೆಗೆ ನುಗ್ಗಿದ ಟ್ರಕ್‌ ಕಾರೊಂದಕ್ಕೆ ಡಿಕ್ಕಿ ಹೊಡೆದು ಕೆಳಗೆ ಉರುಳಿ ಬಿದ್ದಿದ್ದು, ಹಿಂದಿನಿಂದ ಬರುತ್ತಿದ್ದ ಟಿಪ್ಪರ್ ಒಂದು ಅದೇ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಹೊಸಪೇಟೆ ಸಮೀಪ ಗುಂಡಾ ಅರಣ್ಯ ಬಳಿ ಕಾರು ಲಾರಿಗಳ ಭೀಕರ ಅಪಘಾತ: 7 ಜನ ಸಾವು

4

ಅಮೆರಿಕದ ಕ್ಲೌಡಿಯಾ ಗೋಲ್ಡಿನ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್

2023 ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಅಮೆರಿಕದ ಅರ್ಥಶಾಸ್ತ್ರಜ್ಞೆ, 77 ವರ್ಷದ ಕ್ಲೌಡಿಯಾ ಗೋಲ್ಡಿನ್ (Claudia Goldin) ಅವರಿಗೆ ಲಭಿಸಿದೆ.

ಈ ಸುದ್ದಿಯನ್ನು ಪೂರ್ಣ ಓದಿ: ಅಮೆರಿಕದ ಕ್ಲೌಡಿಯಾ ಗೋಲ್ಡಿನ್ ಅವರಿಗೆ ಅರ್ಥಶಾಸ್ತ್ರದ ನೊಬೆಲ್

5

ICC World Cup | ಅಫ್ಗಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಶುಭಮನ್ ಗಿಲ್ ಅಲಭ್ಯ

ಭಾರತ ಕ್ರಿಕೆಟ್‌ ತಂಡವು ಈ ಬಾರಿಯ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲಿರುವ ತನ್ನ ಎರಡನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಅಕ್ಟೋಬರ್‌ 11ರಂದು ಕಣಕ್ಕಿಳಿಯಲಿದೆ. ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಅವರು ಈ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ICC World Cup | ಅಫ್ಗಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಶುಭಮನ್ ಗಿಲ್ ಅಲಭ್ಯ

6

ಮಾನಸಿಕವಾಗಿ ಕುಸಿದು ಹೋಗಿದ್ದೇನೆ.. ಅಪಘಾತದ ಬಗ್ಗೆ ನಟ ನಾಗಭೂಷಣ್‌ ಪ್ರತಿಕ್ರಿಯೆ

ಉತ್ತರಹಳ್ಳಿಯ ವಸಂತಪುರ ಮುಖ್ಯರಸ್ತೆಯಲ್ಲಿ ಸೆಪ್ಟೆಂಬರ್ 30 ರಂದು ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ನಾಗಭೂಷಣ್‌, ‘ನಾನು ಹಿಟ್‌ ಆ್ಯಂಡ್‌ ರನ್‌ ಮಾಡಿಲ್ಲ. ಇದೊಂದು ಆಕಸ್ಮಿಕ ಘಟನೆ. ಅಪಘಾತಕ್ಕೆ ಈಡಾದ ಕುಟುಂಬದವರಿಗೆ ನನ್ನಿಂದ ಏನು ಸಹಾಯವಾಗುತ್ತದೆಯೋ ಅದನ್ನು ಮಾಡುತ್ತೇನೆ’ ಎಂದಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ಮಾನಸಿಕವಾಗಿ ಕುಸಿದು ಹೋಗಿದ್ದೇನೆ.. ಅಪಘಾತದ ಬಗ್ಗೆ ನಟ ನಾಗಭೂಷಣ್‌ ಪ್ರತಿಕ್ರಿಯೆ

7

Israel - Palestine Conflict: ಹಮಾಸ್‌ ದಾಳಿಗೆ 10 ನೇಪಾಳಿ ನಾಗರಿಕರು ಸಾವು

ಇಸ್ರೇಲ್‌ನ ದಕ್ಷಿಣ ಪ್ರಾಂತ್ಯದ ನಗರಗಳ ಮೇಲೆ ಹಮಾಸ್‌ ಬಂಡುಕೋರರು ನಡೆಸಿದ ರಾಕೆಟ್‌ ದಾಳಿಯಲ್ಲಿ ನೇಪಾಳದ 10 ನಾಗರಿಕರು ಸಾವಿಗೀಡಾಗಿದ್ದಾರೆ. ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ನೇಪಾಳದ ವಿದೇಶಾಂಗ ಇಲಾಖೆಯು ಸೋಮವಾರ ತಿಳಿಸಿದೆ.

ಈ ಸುದ್ದಿಯನ್ನು ಪೂರ್ಣ ಓದಿ: Israel - Palestine Conflict: ಹಮಾಸ್‌ ದಾಳಿಗೆ 10 ನೇಪಾಳಿ ನಾಗರಿಕರು ಸಾವು

8

ತಮಿಳುನಾಡಿನ ಅರಿಯಾಲೂರು ಬಳಿ ಪಟಾಕಿ ಘಟಕದಲ್ಲಿ ಭೀಕರ ದುರಂತ: 9 ಜನ ಸಾವು

ಅರಿಯಾಲೂರು ಜಿಲ್ಲೆಯ ಪಟಾಕಿ ಘಟಕವೊಂದರಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ ಒಂಬತ್ತು ಜನ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಪೂರ್ಣ ಓದಿ: ತಮಿಳುನಾಡಿನ ಅರಿಯಾಲೂರು ಬಳಿ ಪಟಾಕಿ ಘಟಕದಲ್ಲಿ ಭೀಕರ ದುರಂತ: 9 ಜನ ಸಾವು

9

ಬರದ ಕುರಿತು ಕೇಂದ್ರ ತಂಡ ಹತ್ತು ದಿನಗಳಲ್ಲಿ ವರದಿ ಸಲ್ಲಿಸಲಿದೆ– ಕೃಷ್ಣ ಬೈರೇಗೌಡ

ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿರುವ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ಹತ್ತು ದಿನಗಳೊಳಗೆ ವರದಿ ಸಲ್ಲಿಸಲಿದೆ. ಆ ಬಳಿಕ ಪರಿಹಾರದ ಮೊತ್ತ ಖಚಿತವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಈ ಸುದ್ದಿಯನ್ನು ಪೂರ್ಣ ಓದಿ: ಬರದ ಕುರಿತು ಕೇಂದ್ರ ತಂಡ ಹತ್ತು ದಿನಗಳಲ್ಲಿ ವರದಿ ಸಲ್ಲಿಸಲಿದೆ– ಕೃಷ್ಣ ಬೈರೇಗೌಡ

10

ಏಷ್ಯನ್‌ ಗೇಮ್ಸ್‌ ಕ್ರೀಡಾಪಟುಗಳೊಂದಿಗೆ ನಾಳೆ ಪ್ರಧಾನಿ ಮೋದಿ ಸಂವಾದ

ಏಷ್ಯನ್‌ ಗೇಮ್ಸ್‌ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ಅ.10) ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ಭೇಟಿ ಮಾಡಲಿದ್ದು ಅವರೊಂದಿಗೆ ಸಂವಾದ ನಡೆಸಲಿದ್ದಾರೆ. 

ಈ ಸುದ್ದಿಯನ್ನು ಪೂರ್ಣ ಓದಿ: ಏಷ್ಯನ್‌ ಗೇಮ್ಸ್‌ ಕ್ರೀಡಾಪಟುಗಳೊಂದಿಗೆ ನಾಳೆ ಪ್ರಧಾನಿ ಮೋದಿ ಸಂವಾದ