ಶನಿವಾರ, 4 ಮೇ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 29 ಅಕ್ಟೋಬರ್‌ 2023

Published 29 ಅಕ್ಟೋಬರ್ 2023, 13:41 IST
Last Updated 29 ಅಕ್ಟೋಬರ್ 2023, 13:41 IST
ಅಕ್ಷರ ಗಾತ್ರ
Introduction

ಕೇರಳದ ಕನ್ವೆನ್ಷನ್ ಸೆಂಟರ್‌ನಲ್ಲಿ ಸ್ಟೋಟ, ಪ್ಯಾಲೆಸ್ಟೀನ್‌ ಪರ ಮೆರವಣಿಗೆ, ಅರ್ಜುನ್‌ ಸರ್ಜಾ ಪುತ್ರಿ ನಿಶ್ಚಿತಾರ್ಥ, ವಿಶ್ವಕಪ್‌ ಕ್ರಿಕೆಟ್‌ ಸೇರಿದಂತೆ ರಾಜ್ಯ, ದೇಶ, ವಿದೇಶ, ಸಿನಿಮಾ ಹಾಗೂ ಕ್ರೀಡೆಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

1

ಬೆಳಗಾವಿಗೆ ನಾನೇ ಹೆಡ್‌ ಆಫ್‌ ದ ಡಿಪಾರ್ಟ್‌ಮೆಂಟ್‌: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ ರಾಜಕಾರಣದಲ್ಲಿ ಯಾರ ನಡುವೆಯೂ ಸಮಸ್ಯೆಯಿಲ್ಲ. ಅಲ್ಲಿ ನಾನೇ ಹೆಡ್‌ ಆಫ್‌ ದ ಡಿಪಾರ್ಟ್‌ಮೆಂಟ್‌. ಹೀಗಾಗಿ ಯಾರ ಮೇಲೆಯೂ ಸಿಟ್ಟಾಗುವ ಪ್ರಸಂಗ ಬರುವುದಿಲ್ಲ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡ

2

ಕೇರಳದ ಕನ್ವೆನ್ಷನ್ ಸೆಂಟರ್ ಒಂದರಲ್ಲಿ ಸ್ಫೋಟ: ಒಬ್ಬ ಸಾವು– ಹಲವರಿಗೆ ಗಾಯ

ಕೇರಳದ ಎರ್ನಾಕುಲಂ ಬಳಿಯ ಕಲಮಸ್ಸೇರಿ ಎಂಬ ಪ್ರದೇಶದ ಕನ್ವೆನ್ಷನ್ ಸೆಂಟರ್ ಒಂದರಲ್ಲಿ ಸ್ಫೋಟವಾಗಿ ಒಬ್ಬ ವ್ಯಕ್ತಿ ಮೃತಪಟ್ಟು 36ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ.

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

3

ಕೇರಳ ಸ್ಫೋಟ ಬೆನ್ನಲ್ಲೇ ದೆಹಲಿಯಲ್ಲಿ ಹೈ ಅಲರ್ಟ್: ಹಲವೆಡೆ ಬಿಗಿ ಪೊಲೀಸ್ ಭದ್ರತೆ

ಕೇರಳದ ಎರ್ನಾಕುಲಂ ಜಿಲ್ಲೆಯ ಕ್ರಿಶ್ಚಿಯನ್ ಸಮಾವೇಶ ಕೇಂದ್ರದಲ್ಲಿ (ಕನ್ವೆನ್ಷನ್‌ ಸೆಂಟರ್) ಇಂದು ಬೆಳಿಗ್ಗೆ ಸ್ಫೋಟ ಸಂಭವಿಸಿದೆ. ಈ ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಮುಖ ಮಾರುಕಟ್ಟೆಗಳು, ಚರ್ಚ್‌ಗಳು, ಮೆಟ್ರೊ ನಿಲ್ದಾಣ, ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

4

CWC 2023: ರೋಹಿತ್– ಸೂರ್ಯ ಉತ್ತಮ ಬ್ಯಾಟಿಂಗ್, ಇಂಗ್ಲೆಂಡ್‌ಗೆ 230 ರನ್ ಗುರಿ

ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಭಾನುವಾರ) ಭಾರತ ಮತ್ತು ಇಂಗ್ಲೆಂಡ್ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ. ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ವಿರುದ್ಧ ಟಾಸ್‌ ಗೆದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 229 ರನ್ ಗಳಿಸಿತು.

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

5

ಕದನ ವಿರಾಮಕ್ಕೆ ಕರೆ– ಪ್ಯಾಲೆಸ್ಟೀನ್ ಪರ ಹಲವೆಡೆ ಮೆರವಣಿಗೆ

ಇಸ್ರೇಲ್- ಹಮಾಸ್ ಕದನ ವಿರಾಮಕ್ಕೆ ಕರೆ ನೀಡಲು ಪ್ಯಾಲೆಸ್ಟೀನ್ ಪರ ಪ್ರತಿಭಟನಾಕಾರರು ಶನಿವಾರ ಲಂಡನ್, ಬರ್ಲಿನ್ ಮತ್ತು ರೋಮ್‌ನಲ್ಲಿ ಮೆರವಣಿಗೆ ನಡೆಸಿದರು ಎಂದು ರಾಯಿಟರ್ಸ್ ವರದಿ ಮಾಡಿದೆ. ಕನಿಷ್ಠ 7 ಸಾವಿರ ಮಂದಿ ಪ್ರತಿಭಟನಾಕಾರರು ಪ್ಯಾಲೆಸ್ಟೀನ್ ಪರ ಶನಿವಾರ ‌ನ್ಯೂಯಾರ್ಕ್‌ನಲ್ಲಿರುವ ಬ್ರೂಕ್ಲಿನ್ ಸೇತುವೆಯ ಮೇಲೆ ಮೆರವಣಿಗೆ ನಡೆಸಿದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

6

ಎಫ್‌ಪಿಐ: ಈ ತಿಂಗಳಲ್ಲಿ ₹20,300 ಕೋಟಿ ಹೂಡಿಕೆ ವಾಪಸ್‌

ವಿದೇಶಿ ಪೋರ್ಟ್‌ಪೋಲಿಯೊ ಹೂಡಿಕೆದಾರರು (ಎಫ್‌ಪಿಐ) ಈ ತಿಂಗಳಲ್ಲಿ ಈವರೆಗೆ ಭಾರತದ ಷೇರುಪೇಟೆಯಿಂದ ₹20,300 ಕೋಟಿ ಹೂಡಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಅಮೆರಿಕದ ಬಾಂಡ್‌ ಮೇಲಿನ ಹೂಡಿಕೆಯಿಂದ ಲಾಭ ಹೆಚ್ಚಳ, ಇಸ್ರೇಲ್‌–ಹಮಾಸ್‌ ಸಂಘರ್ಷದಿಂದಾಗಿ ಸೃಷ್ಟಿಯಾಗಿರುವ ಅನಿಶ್ಚಿತ ಸ್ಥಿತಿ ಇದಕ್ಕೆ ಮುಖ್ಯ ಕಾರಣ

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

7

ಕೊಚ್ಚಿ ಸ್ಫೋಟದ ಹೊಣೆ ಹೊತ್ತು ಪೊಲೀಸರಿಗೆ ಶರಣಾದ ಡೊಮಿನಿಕ್ ಎಂಬ ವ್ಯಕ್ತಿ

ಕೇರಳದ ಕೊಚ್ಚಿಯ ಕಲಮಸ್ಸೇರಿ ಧಾರ್ಮಿಕ ಸಮಾವೇಶದ ಸಂದರ್ಭ ಇಂದು ಬೆಳಿಗ್ಗೆ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿ ತ್ರಿಶೂರ್ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ತಿಳಿಸಿದ್ದಾರೆ. ಆತ ಸ್ಫೋಟದ ಹೊಣೆ ಹೊತ್ತುಕೊಂಡಿದ್ದಾನೆ ಎಂದು ವರದಿ ತಿಳಿಸಿದೆ.

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

8

ಊಟವಷ್ಟೇ, ರಾಜಕೀಯ ಚರ್ಚೆ ನಡೆದಿಲ್ಲ: ಗೃಹ ಸಚಿವ ಜಿ. ಪರಮೇಶ್ವರ ಸ್ಪಷ್ಟನೆ

ಬೆಂಗಳೂರಿನ ನಮ್ಮ ಮನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಊಟ ಮಾಡಿದ್ದು ಬಿಟ್ಟರೆ ಬೇರೇನೂ ಚರ್ಚೆ ಆಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ, ನಿಗಮ, ಮಂಡಳಿ ಅಧ್ಯಕ್ಷರ ನೇಮಕ ಸೇರಿದಂತೆ ಬೇರೆ ಯಾವ ರಾಜಕೀಯ ವಿಚಾರವನ್ನೂ ಚರ್ಚಿಸಿಲ್ಲ. ಸಿದ್ದರಾಮಯ್ಯ ಸೌಜನ್ಯದ ಭೇಟಿ ನೀಡಿದ್ದರು. ಇಬ್ಬರೂ ಊಟ ಮಾಡಿದೆವು. ನಂತರ ಅವರು ಮನೆಗೆ ಹೋದರು’ ಎಂದು ಹೇಳಿದರು.

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

9

ವನ್ಯಜೀವಿ ವಸ್ತುಗಳನ್ನು 2 ತಿಂಗಳಲ್ಲಿ ಸರ್ಕಾರಕ್ಕೆ ಒಪ್ಪಿಸಬೇಕು: ಸಚಿವ ಖಂಡ್ರೆ

ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟುಕೊಂಡವರು ಎರಡು ತಿಂಗಳಲ್ಲಿ ವಾಪಸ್‌ ಕೊಡಲೇಬೇಕು. ಇಂತಹದ್ದೊಂದು ಪ್ರಸ್ತಾವ ನಮ್ಮ ಮುಂದಿದ್ದು, ಸೋಮವಾರ (ಅ.30) ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

10

ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿದ ಅರ್ಜುನ್ ಸರ್ಜಾ ಪುತ್ರಿ ನಿಶ್ಚಿತಾರ್ಥ

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಅವರ ನಿಶ್ಚಿತಾರ್ಥ ಇತ್ತೀಚೆಗೆ ಉಮಾಪತಿ ಅವರೊಂದಿಗೆ ನೆರವೇರಿದೆ.‌ ಚೆನ್ನೈನಲ್ಲಿ ಅರ್ಜುನ್ ಸರ್ಜಾ ನಿರ್ಮಿಸಿರುವ ತಮ್ಮ ಆರಾಧ್ಯ ದೈವ ಆಂಜನೇಯನ ದೇವಸ್ಥಾನದಲ್ಲಿರುವ ಸೀತಾರಾಮರ ಸನ್ನಿಧಾನದಲ್ಲಿ ಐಶ್ವರ್ಯ ಹಾಗೂ ಉಮಾಪತಿ ಅವರು ಉಂಗುರ ಬದಲಾವಣೆ ಮಾಡಿಕೊಂಡರು.

ಹೆಚ್ಚಿನ ಓದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ