ಚೆನ್ನೈ: ತೂತುಕುಡಿ ಬಂದರಿನಲ್ಲಿ ಹಡಗೊಂದರ (ಬಾರ್ಜ್) ಬ್ಯಾಲಸ್ಟ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಮೃತರನ್ನು ರಾಜಸ್ಥಾನ ಮೂಲದ ಸಂದೀಪ್ ಕುಮಾರ್ (25). ಸ್ಥಳೀಯರಾದ ಥಾಮಸ್ (35) ಹಾಗೂ ಸಿರೋನ್ ಜಾರ್ಜ್ (23) ಎಂದು ಗುರುತಿಸಲಾಗಿದೆ.

ಈ ಮೂವರು ಕಾರ್ಮಿಕರು ಹಡಗಿನ ಕೆಳಭಾಗದಲ್ಲಿರುವ ಬ್ಯಾಲಸ್ಟ್ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದರು. ಇಲ್ಲಿ ಸಂಗ್ರಹಗೊಂಡಿದ್ದ ವಿಷಕಾರಿ ಅನಿಲವನ್ನು ಉಸಿರಾಡಿದ ಪರಿಣಾಮ ಅವರು ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಕ್ತಾ ಇನ್ಫ್ರಾ ಕಂಪನಿಗೆ ಸೇರಿದ ಈ ಹಡಗನ್ನು ಶ್ರೀಲಂಕಾ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಕಟ್ಟಡ ಸಾಮಗ್ರಿ ಸಾಗಿಸಲು ಬಂದರಿಗೆ ತಂದು ನಿಲ್ಲಿಸಲಾಗಿತ್ತು.

ಮೂವರು ಕಾರ್ಮಿಕರು ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೇ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದರು. ಅವರಿಗೆ ಯಾವುದೇ ರಕ್ಷಣಾ ಸಾಧನಗಳನ್ನು ನೀಡಿರಲಿಲ್ಲ ಎಂದು ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ.

ಹಡಗಿನ ಮಾಲೀಕರು, ಕ್ಯಾಪ್ಟನ್ ಅವರ ಮೇಲೆ ದೂರ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.