ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್‌: ಪುತ್ರನ ಕೊಂದು, ಕೆಲಸದ ಸ್ಥಳದಲ್ಲಿಯೇ ಬಿಸಾಡಿದ ಪೊಲೀಸ್‌ ಸಹಾಯಕ

Published 2 ಜೂನ್ 2024, 13:12 IST
Last Updated 2 ಜೂನ್ 2024, 13:12 IST
ಅಕ್ಷರ ಗಾತ್ರ

ನವಸಾರಿ (ಗುಜರಾತ್‌): ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಪೊಲೀಸ್‌ ಸಹಾಯಕನೊಬ್ಬ ತನ್ನ 10 ವರ್ಷದ ಪುತ್ರನಿಗೆ ವಿಷವುಣಿಸಿ ಕೊಂದು, ತಾನು ಕಾರ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್‌ ಚೌಕಿಯಲ್ಲಿಯೇ ಎಸೆದು ಪರಾರಿಯಾಗಿದ್ದಾನೆ.

ಆರೋಪಿಯನ್ನು ಸಂಜಯ್‌ ಬರಿಯಾ(37) ಎಂದು ಗುರುತಿಸಲಾಗಿದೆ. ಈತ ಟ್ರಾಫಿಕ್ ಬ್ರಿಗೇಡ್‌ನಲ್ಲಿ ಜವಾನನಾಗಿದ್ದು, ಟ್ರಾಫಿಕ್‌ ಪೊಲೀಸರಿಗೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಸದ್ಯ ತಲೆ ಮರೆಸಿಕೊಂಡಿರುವ ಈತನ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಈ ಬಗ್ಗೆ ಆರೋಪಿಯ ಪತ್ನಿ ರೇಖಾ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಆರೋಪಿಯು ಶುಕ್ರವಾರ ಕೆಲಸಕ್ಕೆ ತೆರಳುವಾಗ ಪುತ್ರನನ್ನು ಜೊತೆಗೆ ಕರೆದೊಯ್ದಿದ್ದಾನೆ. ಬಳಿಕ ಪುತ್ರನನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ. ಶನಿವಾರ ತನ್ನ ಪತ್ನಿಗೆ ಕರೆ ಮಾಡಿ, ಪುತ್ರನ ಮೃತದೇಹವನ್ನು ತಾನು ಕೆಲಸ ಮಾಡುತ್ತಿದ್ದ ಚೌಕಿಯಲ್ಲಿಯೇ ಬಿಸಾಡಿರುವುದಾಗಿ ತಿಳಿಸಿದ್ದಾನೆ’ ಎಂದು ನವಸಾರಿ ಎಸ್‌ಪಿ ಸುಶೀಲ್‌ ಅಗರ್‌ವಾಲ್‌ ತಿಳಿಸಿದ್ದಾರೆ.

‘ಪೊಲೀಸರು ಸ್ಥಳ ಪರಿಶೀಲನೆ ನಡೆಸುವ ವೇಳೆ ಬಾಲಕನ ಮೃತದೇಹ ಪತ್ತೆಯಾಗಿದೆ. ಆತನ ಬಾಯಿಂದ ವಿಷದ ನೊರೆ ಬಂದಿರುವುದು ಹಾಗೂ ಕೊರಳಲ್ಲಿ ನೈಲಾನ್‌ ಹಗ್ಗ ಬಿಗಿದಿರುವುದು ಕಂಡುಬಂದಿದೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT