ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮ್‌ತಾರಾ: ರೈಲು ಹರಿದು ಇಬ್ಬರು ಸಾವು

Published 28 ಫೆಬ್ರುವರಿ 2024, 15:49 IST
Last Updated 28 ಫೆಬ್ರುವರಿ 2024, 15:49 IST
ಅಕ್ಷರ ಗಾತ್ರ

ಜಾಮ್‌ತಾರಾ: ಜಾರ್ಖಂಡ್‌ನಲ್ಲಿ ಬುಧವಾರ ಸಂಜೆ ರೈಲು ಹರಿದು ಕನಿಷ್ಠ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕಾಲ್‌ಝಾರಿಯಾ ನಿಲ್ದಾಣದ ಬಳಿ ಹಲವರ ಮೇಲೆ ರೈಲು ಹರಿದಿದೆ ಎನ್ನಲಾಗಿದೆ. ಜಾಮ್‌ತಾರಾ ಪೊಲೀಸ್ ಉಪ ವಿಭಾಗಾಧಿಕಾರಿ ಮುಜಿಬುರ್‌ ರಹಮಾನ್‌ ಇಬ್ಬರ ಸಾವನ್ನು ಖಚಿತಪಡಿಸಿದ್ದಾರೆ. 

ವಿದ್ಯಾಸಾಗರ್‌–ಕಾಶಿತಾನ್ ನಡುವೆ ಸಂಚರಿಸುವ ಆಂಗನ್‌ ಎಕ್ಸ್‌ಪ್ರೆಸ್‌ ರೈಲು ಯಾರೋ ಚೈನ್ ಎಳೆದ ಕಾರಣದಿಂದಾಗಿ ನಿಂತಿತ್ತು. ಇನ್ನೊಂದು ಹಳಿ ಮೇಲೆ ಮೆಮು ರೈಲು ಇಬ್ಬರ ಮೇಲೆ ಹರಿಯಿತು. ಆ ಇಬ್ಬರು ಆಂಗನ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕರಲ್ಲ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಚೇತನ್‌ ನಂದ್‌ ಸಿಂಗ್‌ ಹೇಳಿದ್ದಾರೆ.  ಅವಘಡದಲ್ಲಿ ಇನ್ನಷ್ಟು ಜನರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT