ಪಿಟಿಐ

ಪಾಲ್ಗರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬುಡಕಟ್ಟು ಯುವತಿಯೊಬ್ಬರನ್ನು ₹3 ಲಕ್ಷಕ್ಕೆ ‘ಮಾರಾಟ’ ಮಾಡಿದ ಆರೋಪದಲ್ಲಿ ನಾಲ್ವರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.

ಕಾತ್ಕರಿ ಸಮುದಾಯಕ್ಕೆ ಸೇರಿದ 20 ವರ್ಷದ ಯುವತಿಯನ್ನು ನಾಸಿಕ್ನ ಹುಡುಗನೊಬ್ಬನು 2024ರ ಮೇ ತಿಂಗಳಲ್ಲಿ ಮದುವೆಯಾಗಿದ್ದನು. ಯುವತಿಯನ್ನು ಮದುವೆ ಮಾಡಿಕೊಳ್ಳಲು ಹುಡುಗ ಮತ್ತು ಆತನ ತಾಯಿ ಇಬ್ಬರು ಮಧ್ಯವರ್ತಿಗಳಿಗೆ ₹3 ಲಕ್ಷ ನೀಡಿದ್ದರು.

ಜಾತಿ ಹೆಸರಲ್ಲಿ ಹೀಯಾಳಿಕೆ: ‘ಮದುವೆಯಾದ ಬಳಿಕ, ನನ್ನ ಜಾತಿಯನ್ನು ಮುಂದಿಟ್ಟುಕೊಂಡು ನನ್ನನ್ನು ಹೀಯಾಳಿಸಲಾಗುತ್ತಿತ್ತು. ದೈಹಿಕವಾಗಿ ಮತ್ತು ಮಾನಸಿಕವಾಗಿ ಗಂಡ ಮತ್ತು ಆತನ ತಾಯಿ ನನಗೆ ಹಿಂಸೆ ನೀಡಿದ್ದಾರೆ’ ಎಂದು ಯುವತಿಯು ತನ್ನ ದೂರಿನಲ್ಲಿ ಹೇಳಿದ್ದಾರೆ.

ಗರ್ಭಿಣಿಯಾದ ಸಂದರ್ಭದಲ್ಲಿಯೂ ತನಗೆ ಹೊತ್ತು ಹೊತ್ತಿಗೆ ಊಟ ಮಾಡಲು ಬಿಡುತ್ತಿರಲಿಲ್ಲ ಎಂದೂ ಯುವತಿ ಆರೋಪಿಸಿದ್ದಾಳೆ. ಮಗು ಜನಿಸಿದ ಬಳಿಕ 2025ರ ಜೂನ್ನಲ್ಲಿ ಯುವತಿ ತವರು ಮನೆಗೆ ಬಂದಿದ್ದು, ಸದ್ಯ ಇಲ್ಲೇ ಉಳಿದುಕೊಂಡಿದ್ದಾರೆ.

ಪ್ರಕರಣ ತಿಳಿದಿದ್ದು ಹೇಗೆ?: ‘ಆರೋಪಿಗಳು ಜ.6ರಂದು ಯುವತಿಯ ಮಗುವನ್ನು ಅಪಹರಿಸಲು ಯತ್ನಿಸಿದರು. ಈ ಬಳಿಕ ಯುವತಿಯು ದೂರು ನೀಡಿದರು. ಗಂಡ, ಆತನ ತಾಯಿ ಮತ್ತು ಇಬ್ಬರು ಮಧ್ಯವರ್ತಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಗಳ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.