ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತನನ್ನು ಅಪಹರಿಸಿ ಮುಖದ ಮೇಲೆ ಮೂತ್ರ ಮಾಡಿದ ಟಿಎಂಸಿ ಸದಸ್ಯರು

Published 15 ಜುಲೈ 2023, 13:27 IST
Last Updated 15 ಜುಲೈ 2023, 13:27 IST
ಅಕ್ಷರ ಗಾತ್ರ

ಕೋಲ್ಕತ್ತ: ಪಂಚಾಯಿತಿ ಚುನಾವಣೆ ವೇಳೆ ಭಾರಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ, ಫಲಿತಾಂಶ ಬಳಿಕವೂ ಹಿಂಸಾಚಾರದ ಪ್ರಕರಣಗಳು ವರದಿಯಾಗುತ್ತಿವೆ.

ಬಿಜೆಪಿ ಕಾರ್ಕಕರ್ತರೊಬ್ಬರನ್ನು ಅಪಹರಿಸಿ, ಅವರ ಮುಖಕ್ಕೆ ಮೂತ್ರ ಮಾಡಿದ ಘಟನೆ ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯಿತಿ ಚುನಾವಣೆಯಲ್ಲಿ ಬೂತ್ ಏಜೆಂಟ್‌ ಆಗಿದ್ದ ಬಿಜೆಪಿ ಕಾರ್ಯಕರ್ತರೊಬ್ಬರನ್ನು, ಗುರುವಾರ ರಾತ್ರಿ ಟಿಎಂಸಿಯ ಕಾರ್ಯಕರ್ತರು ಅಪಹರಣ ಮಾಡಿ, ಗಾರ್ಬೆಟದಲ್ಲಿರುವ ಪಕ್ಷದ ಕಚೇರಿಗೆ ತಂದಿದ್ದಾರೆ. ಅಲ್ಲಿ ಆವರ ಮೇಲೆ ಹಲ್ಲೆ ನಡೆಸಿದ್ದಾರೆ. ನೀರು ಕೇಳಿದಾಗ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ.

ಸಂತ್ರಸ್ತನನ್ನು ಶುಕ್ರವಾರ ಸಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಕ್ಷದ ಉಪಾಧ್ಯಕ್ಷ ಸಮಿತ್‌ ದಾಸ್‌ ನೇತೃತ್ವದ ಬಿಜೆಪಿಯ ತಂಡ ಶನಿವಾರ ಬೆಳಿಗ್ಗೆ ಸಂತ್ರಸ್ತನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದೆ.

‘ಚುನಾವಣೆಯ ವಿಜಯವನ್ನು ಸಂಭ್ರಮಿಸಲು ಟಿಎಂಸಿ ಕಾರ್ಯಕರ್ತ ನಮ್ಮ ಕಾರ್ಯಕರ್ತನಿಂದ ಹಣ ಕೇಳಿದ್ದಾರೆ. ಬಡವನಾಗಿದ್ದ ನಮ್ಮ ಕಾರ್ಯಕರ್ತ ಹಣ ನೀಡಲು ನಿರಾಕರಿಸಿದ್ದಾನೆ. ಹೀಗಾಗಿ ಆತನನ್ನು ಅಪಹರಿಸಿ ಸ್ಥಳೀಯ ಪಕ್ಷದ ಕಚೇರಿಗೆ ಕರೆತಂದಿದ್ದಾರೆ. ಅಲ್ಲಿ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ನೀರು ಕೇಳಿದಾಗಿ ಆತನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿದೆ. ನಾವು ಈಗಾಗಲೇ ದೂರು ದಾಖಲಿಸಿದ್ದು, ಇದರ ವಿರುದ್ಧ ತೀವ್ರ ಹೋರಾಟ ಸಂಘಟಿಸಲಿದ್ದೇವೆ‘ ಎಂದು ದಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT