ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತ್ರಿಪುರಾ ಸ್ಪೀಕರ್ ಚುನಾವಣೆ: ಸಿಪಿಐ-ಎಂ, ಕಾಂಗ್ರೆಸ್ ಜಂಟಿ ಅಭ್ಯರ್ಥಿ ಕಣಕ್ಕೆ

Last Updated 23 ಮಾರ್ಚ್ 2023, 13:05 IST
ಅಕ್ಷರ ಗಾತ್ರ

ಅಗರ್ತಲಾ(ತ್ರಿಪುರಾ): ತ್ರಿಪುರಾ ವಿಧಾನಸಭಾ ಸ್ಪೀಕರ್‌ ಚುನಾವಣೆಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷ ಸಿಪಿಐ-ಎಂ ಮತ್ತು ಕಾಂಗ್ರೆಸ್ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ.

ಹೊಸದಾಗಿ ರಚನೆಯಾಗಿರುವ ತ್ರಿಪುರಾ ವಿಧಾನಸಭೆಯ ಮೊದಲ ಮೂರು ದಿನಗಳ ಅಧಿವೇಶನವು ನೂತನ ಸ್ಪೀಕರ್ ಆಯ್ಕೆಯೊಂದಿಗೆ ಶುಕ್ರವಾರ ಆರಂಭವಾಗಲಿದೆ.

ಹಿಂದಿನ ವಿಧಾನಸಭೆಯಲ್ಲಿ ಉಪ ಸಭಾಪತಿಯಾಗಿದ್ದ ಬಿಜೆಪಿಯ ಬಿಸ್ವ ಬಂಧು ಸೇನ್ ವಿರುದ್ಧ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಹಿರಿಯ ನಾಯಕ ಗೋಪಾಲ್ ರಾಯ್ ಅವರನ್ನು ಕಣಕ್ಕಿಳಿದಿದ್ದಾರೆ. ಸಿಪಿಐ-ಎಂ 11 ಹಾಗೂ ಕಾಂಗ್ರೆಸ್‌ ಮೂವರು ಶಾಸಕರ ಬಲ ಹೊಂದಿದೆ.

13 ಸ್ಥಾನಗಳನ್ನು ಗೆದ್ದಿರುವ ತಿಪ್ರಾ ಮೋಥಾ ಪಕ್ಷ (ಟಿಎಂಪಿ) ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಂತರ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಪಕ್ಷ ಯಾರಿಗೆ ಬೆಂಬಲ ನೀಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪಕ್ಷದ ಶಾಸಕರೊಂದಿಗೆ ಮಾತುಕತೆ ನಡೆಸಿದ ಬಳಿಕ ತಮ್ಮ ನಿಲುವು ಪ್ರಕಟಿಸಲಾಗುವುದು ಎಂದು ಟಿಎಂಪಿ ಮುಖ್ಯಸ್ಥ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮನ್ ಐಎಎನ್‌ಎಸ್‌ ಸುದ್ಧಿಸಂಸ್ಥೆಗೆ ತಿಳಿಸಿದ್ದಾರೆ.

ಬಿಜೆಪಿ 32 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಅದರ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ) ಒಂದು ಸ್ಥಾನವನ್ನು ಹೊಂದಿದೆ.

ಬಿಜೆಪಿಯ ಬಿಸ್ವ ಬಂಧು ಸೇನ್ ಹಾಗೂ ಪ್ರತಿಪಕ್ಷದ ಅಭ್ಯರ್ಥಿ ಗೋಪಾಲ್ ರಾಯ್ ಇಂದು (ಗುರುವಾರ) ನಾಮಪತ್ರ ಸಲ್ಲಿಸಿದರು.

ತ್ರಿಪುರಾ 60 ವಿಧಾನಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 32, ಸಿಪಿಐ-ಎಂ 11, ಕಾಂಗ್ರೆಸ್‌ 3, ಟಿಎಂಪಿ 13, ಐಪಿಎಫ್‌ಟಿ 1 ಸ್ಥಾನವನ್ನು ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT