ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರದಲ್ಲಿ ಶೀಘ್ರವೇ ಸಂಚಾರಿ ಪಶು ವೈದ್ಯಕೀಯ ಸೇವೆ

Last Updated 1 ಮೇ 2022, 10:07 IST
ಅಕ್ಷರ ಗಾತ್ರ

ಅಗರ್ತಲಾ: ಸಾಕುಪ್ರಾಣಿಗಳ ಚಿಕಿತ್ಸೆಗೆ ಅನುಕೂಲವಾಗುವಂತೆ ತ್ರಿಪುರ ಸರ್ಕಾರ ಸಂಚಾರಿ ಪಶು ವೈದ್ಯಕೀಯ ಸೇವೆ ಆರಂಭಿಸಲಿದೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.

ಪಶು ಸಂಪನ್ಮೂಲ ಅಭಿವೃದ್ಧಿ ಸಚಿವ ಭಗಬನ್‌ ದಾಸ್‌ ಅವರು, 'ಶಸ್ತ್ರಚಿಕಿತ್ಸೆ ಸೌಲಭ್ಯ, ಪ್ರಯೋಗಶಾಲೆ ಮತ್ತು ವೈದ್ಯರನ್ನೂ ಒಳಗೊಂಡ 12 ವ್ಯಾನ್‌ಗಳು ಸಜ್ಜಾಗಿದ್ದು, ಹಸು, ಮೇಕೆ, ಹಂದಿಗಳಿಗೆ ಚಿಕಿತ್ಸೆ ನೀಡಲಾಗುವುದು' ಎಂದು ಹೇಳಿದ್ದಾರೆ.

ಮುಂದುವರಿದು, 'ರಾಜ್ಯಮಟ್ಟದ ಸಹಾಯವಾಣಿ ಸಂಖ್ಯೆ ತೆರೆಯಲಾಗುವುದು. ಪ್ರಾಣಿಯ ಮಾಲೀಕರಿಂದ ಕರೆ ಸ್ವೀಕರಿಸಿದ ಕೇವಲ 20 ನಿಮಿಷಗಳಲ್ಲೇ ಸಹಾಯ ಲಭ್ಯವಾಗಲಿದೆ' ಎಂದೂ ತಿಳಿಸಿದ್ದಾರೆ.

ತಾವೂ ರೈತಪಿ ಕುಟುಂಬದವರಾಗಿದ್ದು, ಅನಾರೋಗ್ಯಕ್ಕೀಡಾದ ಪ್ರಾಣಿಗಳಿಗೆ ಸರಿಯಾದ ಚಿಕಿತ್ಸೆ ಕೊಡಿಸಲಾಗದೆ ಮಾರಾಟ ಮಾಡುತ್ತಿದ್ದುದಾಗಿ ಬೇಸರ ವ್ಯಕ್ತಪಡಿಸಿರುವ ದಾಸ್‌, ‘ಅದೇರೀತಿಯ ಅನುಭವ ಜಾನುವಾರು ಸಾಕುವವರಿಗೆ ಆಗುವುದು ನನಗೆ ಇಷ್ಟವಿಲ್ಲ. ಸಂಚಾರಿ ಪಶು ಆರೋಗ್ಯ ಸೇವೆಯಿಂದ ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಣಿಗಳ ಚಿಕಿತ್ಸೆಗೆ ನೆರವಾಗಲಿದೆ ಎಂಬ ಭರವಸೆ ಇದೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT