ನವದೆಹಲಿ: SARS-CoV-2 ನ N440K ಮತ್ತು E484K ಎರಡು ರೂಪಾಂತರಗಳು ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪತ್ತೆಯಾಗಿವೆ. ಆದರೆ ಈ ಎರಡು ರಾಜ್ಯಗಳಲ್ಲಿನ ಕೆಲವು ಜಿಲ್ಲೆಗಳಲ್ಲಿ ಪ್ರಕರಣಗಳ ಉಲ್ಬಣಕ್ಕೆ ಅವೇ ಕಾರಣವೆಂದು ನಂಬಲು ಸದ್ಯ ಯಾವುದೇ ಪುರಾವೆಯಿಲ್ಲ ಎಂದು ಕೇಂದ್ರವು ಮಂಗಳವಾರ ತಿಳಿಸಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ. ಪಾಲ್, ದೇಶದಲ್ಲಿ ಈ ವರೆಗೆ 187 ಜನರಲ್ಲಿ ಇಂಗ್ಲೆಂಡ್ ರೂಪಾಂತರದ ಸೋಂಕು ತಗುಲಿರುವುದು ಪತ್ತೆಯಾಗಿದೆ. ಆರು ಜನರಿಗೆ ದಕ್ಷಿಣ ಆಫ್ರಿಕಾದ ರೂಪಾಂತರ ಸೋಂಕು ತಗುಲಿದೆ. ಒಬ್ಬ ವ್ಯಕ್ತಿಯಲ್ಲಿ ಬ್ರೆಜಿಲ್ ರೂಪಾಂತರದ ಸೋಂಕು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

'SARS-CoV-2 ನ N440K ಮತ್ತು E484K ಎರಡೂ ರೂಪಾಂತರಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ. ಕೇರಳ ಮತ್ತು ತೆಲಂಗಾಣದಲ್ಲೂ ಈ ರೂಪಾಂತರಗಳು ಕಂಡುಬಂದಿವೆ. ಅಲ್ಲದೆ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ರೂಪಾಂತರದ ಮೂರು ಪ್ರಕರಣಗಳು ದೇಶದಲ್ಲಿವೆ. ಆದರೆ ಮಹಾರಾಷ್ಟ್ರ ಮತ್ತು ಕೇರಳದ ಕೆಲವು ಜಿಲ್ಲೆಗಳಲ್ಲಿ ಏಕಾಏಕಿ ಉಂಟಾದ ಉಲ್ಬಣಕ್ಕೆ ರೂಪಾಂತರ ಸೋಂಕು ಕಾರಣ ಎನ್ನಲು ಯಾವುದೇ ಪುರಾವೆಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.