ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ | ಅಂತರರಾಷ್ಟ್ರೀಯ ಗಡಿ ಬಳಿ ಎರಡು ಡ್ರೋನ್‌, 1 ಕೆ.ಜಿ ಹೆರಾಯಿನ್‌ ವಶ

Published 19 ಡಿಸೆಂಬರ್ 2023, 5:05 IST
Last Updated 19 ಡಿಸೆಂಬರ್ 2023, 5:05 IST
ಅಕ್ಷರ ಗಾತ್ರ

ಚಂಡೀಗಢ: ಪಂಜಾಬ್‌ನ ಅಮೃತಸರದ ಭಾರತ–ಪಾಕಿಸ್ತಾನ ಗಡಿಯ ಬಳಿ ಎರಡು ಡ್ರೋನ್‌ಗಳು ಮತ್ತು ಸುಮಾರು ಒಂದು ಕೆ.ಜಿ ಹೆರಾಯಿನ್‌ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್‌ ವಕ್ತಾರರು ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಅಮೃತಸರದ ಧನೋಯ್‌ ಖುರ್ದ್‌ ಗ್ರಾಮದ ಬಳಿ ಪಂಜಾಬ್‌ ಪೊಲೀಸರೊಂದಿಗೆ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ, ಚೀನಾ ನಿರ್ಮಿತ ಡ್ರೋನ್‌ ಮತ್ತು 430 ಗ್ರಾಂ ತೂಕದ ಹೆರಾಯಿನ್‌ ಪೊಟ್ಟಣವನ್ನು ವಶಪಡಿಸಿಕೊಳ್ಳಲಾಗಿದೆ. ಹೆರಾಯಿನ್‌ ಪೊಟ್ಟಣಕ್ಕೆ ನೈಲಾನ್‌ ರಿಂಗ್‌ ಮತ್ತು ಸಣ್ಣ ಟಾರ್ಚ್‌ ಅನ್ನು ಸಹ ಜೋಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸೋಮವಾರ ಸಂಜೆ ಇದೇ ಧನೋಯ್‌ ಖುರ್ದ್‌ ಗ್ರಾಮದಲ್ಲಿ ಶೋಧ ಕಾರ್ಯಾಚರಣೆಯಲ್ಲಿ ಮತ್ತೊಂದು ಡ್ರೋನ್‌, ಚೀನಾ ನಿರ್ಮಿತ ಕ್ವಾಡ್‌ಕಾಪ್ಟರ್‌ ಮತ್ತು 540 ಗ್ರಾಂ ತೂಕದ ಹೆರಾಯಿನ್‌ ಪೊಟ್ಟಣವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT