ಮುಂಬೈ: ಮರಾಠ ಸಾಮ್ರಾಟ ಛತ್ರಪತಿ ಶಿವಾಜಿಯ ಜೀವನ ಹಾಗೂ ಅವರ ಕಾಲಘಟಕ್ಕೆ ಸಂಬಂಧಿಸಿದ 12 ಐತಿಹಾಸಿಕ ಕೋಟೆಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥನ ಪಡೆದಿವೆ.

ಶುಕ್ರವಾರ (ಜುಲೈ 12ರ) ರಾತ್ರಿ ಪಟ್ಟಿ ಬಿಡುಗಡೆಯಾಗಿದೆ.

ಕೇಂದ್ರ ಸರ್ಕಾರವು, ದೇಶದ ಮರಾಠ ಸೇನಾ ಭೂಪ್ರದೇಶಗಳನ್ನು 2024–25ನೇ ಸಾಲಿನ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ನಾಮನಿರ್ದೇಶನ ಮಾಡಿತ್ತು.

ಮಹಾರಾಷ್ಟ್ರದಲ್ಲಿರುವ ಸಲ್ಹೇರ್ ಕೋಟೆ, ಶಿವನೇರಿ ಕೋಟೆ, ಲೋಹಗಢ ಕೋಟೆ, ಖಂಡೇರಿ ಕೋಟೆ, ರಾಯಗಢ ಕೋಟೆ, ರಾಜಗಢ ಕೋಟೆ, ಪ್ರತಾಪಗಢ ಕೋಟೆ, ಸುವರ್ಣದುರ್ಗ ಕೋಟೆ, ಪನ್ಹಾಲಾ ಕೋಟೆ, ವಿಜಯದುರ್ಗ ಕೋಟೆ, ಸಿಂಧುದುರ್ಗ ಕೋಟೆ ಮತ್ತು ತಮಿಳುನಾಡಿನಲ್ಲಿರುವ ಗಿಂಗಿ ಕೋಟೆ ಈ ಪಟ್ಟಿಯಲ್ಲಿವೆ.

17ರಿಂದ 19ನೇ ಶತಮಾನದ ಅವಧಿಯಲ್ಲಿ ಸುಧಾರಣೆಗೊಂಡ ಮರಾಠಾ ಸೇನಾ ನೆಲೆಗಳು, ಮರಾಠ ಆಡಳಿತಗಾರರು ಸೇನಾ ವ್ಯವಸ್ಥೆ ಹಾಗೂ ಕೋಟೆಗಳ ಬಗ್ಗೆ ಹೊಂದಿದ್ದ ಅಸಾಧಾರಣ ಕಲ್ಪನೆಗಳನ್ನು ಪ್ರತಿನಿಧಿಸುತ್ತವೆ.

1630ರ ಫೆಬ್ರುವರಿ 19ರಂದು ಜನಿಸಿದ್ದ ಶಿವಾಜಿ ಅವರ ಪಟ್ಟಾಭಿಷೇಕ ರಾಯಗಢ ಕೋಟೆಯಲ್ಲಿ 1674ರ ಜೂನ್ 6ರಂದು ನಡೆದಿತ್ತು. ಆ ಬಳಿಕ ಅವರು, 'ಹಿಂದವಿ-ಸ್ವರಾಜ್ಯ'ಕ್ಕೆ ಅಡಿಪಾಯ ಹಾಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.