ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC Exams 2024: ಅಧಿಸೂಚನೆ ಪ್ರಕಟ– ಇಲ್ಲಿದೆ ವಿವರ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ
Published 14 ಫೆಬ್ರುವರಿ 2024, 12:37 IST
Last Updated 14 ಫೆಬ್ರುವರಿ 2024, 12:37 IST
ಅಕ್ಷರ ಗಾತ್ರ

ನವದೆಹಲಿ: ನಾಗರಿಕ ಸೇವೆಯನ್ನು ಸೇರಬಯಸುವವರಿಗಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗೆ ಅಧಿಸೂಚನೆ ಪ್ರಕಟಗೊಂಡಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನವಾಗಿದೆ.

ಈ ಬಾರಿ 1,056 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಪೂರ್ವಭಾವಿ ಪರೀಕ್ಷೆ ಮೇ 26ರಂದು ನಡೆಯಲಿದೆ. ಅರ್ಜಿ ಸಲ್ಲಿಸುವವರ ವಯೋಮಾನ 21ರಿಂದ 32 (2024ರ ಆಗಸ್ಟ್‌ 1ಕ್ಕೆ) ರವರೆಗೆ ಇರಬೇಕು. ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಿದ್ಯಾರ್ಹತೆ ಪದವಿಯಾಗಿರಬೇಕು. ಲೋಕಸೇವಾ ಆಯೋಗದ ಅಂತರ್ಜಾಲ ಪುಟದ ಮೂಲಕ ಅರ್ಜಿ ಸಲ್ಲಿಸಬಹುದು ಎಂದು UPSC ಹೇಳಿದೆ.

ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಎಂಬ ಮೂರು ಹಂತದ ಈ ಪರೀಕ್ಷೆಯನ್ನು ಗರಿಷ್ಠ 6 ಬಾರಿಯಷ್ಟೇ ಎದುರಿಸಲು ಅವಕಾಶ ಕಲ್ಪಿಸಲಾಗಿದೆ.

ಪೂರ್ವಭಾವಿ ಪರೀಕ್ಷೆ: ಇದರಲ್ಲಿ 2 ಕಡ್ಡಾಯ ಪತ್ರಿಕೆಗಳಿವೆ. ಪ್ರತಿಯೊಂದಕ್ಕೂ 200 ಅಂಕಗಳು. 2 ಗಂಟೆಯ ಈ ಪರೀಕ್ಷೆಯ ಎರಡೂ ಪತ್ರಿಕೆಗಳು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಸಾಮಾನ್ಯ ಜ್ಞಾನ ಪತ್ರಿಕೆ–2 ಅರ್ಹತೆಯ ಪತ್ರಿಕೆಯಾಗಿದೆ. ಇದರಲ್ಲಿ ಕನಿಷ್ಠ ಶೇ 33ರಷ್ಟು ಅಂಕ ಗಳಿಸುವುದು ಕಡ್ಡಾಯ. ಇದು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಇರಲಿದೆ.

ಮುಖ್ಯ ಪರೀಕ್ಷೆ: ಮೆರಿಟ್ ಆಧಾರಿತ ಈ ಪರೀಕ್ಷೆಯಲ್ಲಿ ದೀರ್ಘ ಉತ್ತರಗಳನ್ನು ಬರೆಯಬೇಕು. ಪತ್ರಿಕೆ–1ರಲ್ಲಿ ಭಾರತೀಯ ಭಾಷೆ ಹಾಗೂ ಪತ್ರಿಕೆ–2ರಲ್ಲಿ ಇಂಗ್ಲಿಷ್‌ ಇರಲಿದೆ. 300 ಅಂಕಗಳಿಗೆ ಈ ಪರೀಕ್ಷೆ ನಡೆಯಲಿದೆ. ಪ್ರಬಂಧ, ಸಾಮಾನ್ಯ ಜ್ಞಾನ–1, 2, 3 ಹಾಗೂ 4 ಪತ್ರಿಕೆಗಳು ಮತ್ತು ಐಚ್ಛಿಕ ವಿಷಯ ಸೇರಿ 275 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಇವುಗಳಲ್ಲಿ ಕನಿಷ್ಠ ಅರ್ಹತೆಯ ಅಂಕಗಳಿಲ್ಲ.

ರಿಟನ್ ಟೆಸ್ಟ್‌ನಲ್ಲಿ 9 ಪತ್ರಿಕೆಗಳು ಇರಲಿವೆ. ಪ್ರಬಂಧ ಮಾದರಿಯ ಉತ್ತರಗಳನ್ನು ಬರೆಯಬೇಕಿದ್ದು ವಿಭಾಗ–2ರಲ್ಲಿ ಇರಲಿದೆ. ನಂತರ ಸಂದರ್ಶನ ನಡೆಯಲಿದೆ. ಸಂದರ್ಶನ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲು ಲಿಖಿತ ಪರೀಕ್ಷೆಯಲ್ಲಿ ಅಂಕಗಳು ಆಧಾರವಾಗಲಿವೆ.

ಅರ್ಜಿ ಸಲ್ಲಿಸುವ ಕೊಂಡಿ: upsconline.nic.in/upsc/OTRP/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT