ನವದೆಹಲಿ: ಭಾರತವು ಜಾಗತಿಕ ಮಟ್ಟದಲ್ಲಿ ಬಹುಪಕ್ಷೀಯ ಪಾಲುದಾರಿಕೆ ಹೊಂದುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್ ಮತ್ತು ಚೀನಾ ದೇಶಗಳ ಪ್ರವಾಸದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಮೆರಿಕ ಸುಂಕ ನೀತಿಯ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

‘ಅಮೆರಿಕವು ಅವಿವೇಕ ಮತ್ತು ಅನ್ಯಾಯದ ಸುಂಕ ಯುದ್ಧ ಪ್ರಾರಂಭಿಸಿದ ನಂತರ ನೀವು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಹೊರಟಿರುವುದು ಎಲ್ಲ ಭಾರತೀಯರಂತೆ ನನಗೂ ಸಮಾಧಾನ ತಂದಿದೆ. ಹೊಸ ಉಪಕ್ರಮಗಳ ಲಾಭವನ್ನು ಭಾರತವು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ನೀವು ಅನುಸರಿಸುತ್ತಿರುವ ‘ಬಹು-ಜೋಡಣೆ’ ನೀತಿಯು ಮುಂದಿನ ದಿನಗಳಲ್ಲಿ ಸಮೃದ್ಧ ಲಾಭಾಂಶಗಳನ್ನು ನೀಡುವುದು ಖಚಿತ. ಜಗತ್ತು ಅದರ ಪ್ರಾಮುಖ್ಯ ಮತ್ತು ವಾಸ್ತವವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ. ‘ಅಲಿಪ್ತ ನೀತಿ’ಯ ನಮ್ಮ ಹಿಂದಿನ ಪ್ರತಿಪಾದನೆಗೆ ಹೋಲಿಸಿದರೆ ಇದು ಬಹಳ ರಚನಾತ್ಮಕ ಮತ್ತು ಸಕಾರಾತ್ಮಕ ಸೂತ್ರ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.