ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಹೀರಾತು, ಸೂಚನಾ ಫಲಕಗಳಲ್ಲಿ ಮರಾಠಿ ಬಳಸಿ: ಕೊಂಕಣ ರೈಲ್ವೆಗೆ 'ಮಹಾ ಸೂಚನೆ'

ಕೊಂಕಣ ರೈಲ್ವೆಗೆ ಮಹಾರಾಷ್ಟ್ರ ಸರ್ಕಾರ ಸೂಚನೆ
Last Updated 4 ಡಿಸೆಂಬರ್ 2020, 7:18 IST
ಅಕ್ಷರ ಗಾತ್ರ

ಮುಂಬೈ: ಜಾಹೀರಾತು, ಸೂಚನಾ ಫಲಕಗಳಲ್ಲಿ ಇಂಗ್ಲಿಷ್‌, ಹಿಂದಿ ಜೊತೆಗೆ ಮರಾಠಿಯನ್ನು ಬಳಸುವಂತೆ ಮಹಾರಾಷ್ಟ್ರ ಸರ್ಕಾರ ಕೊಂಕಣ ರೈಲ್ವೆಗೆ ಸೂಚಿಸಿದೆ.

ಈ ಸಂಬಂಧ ಮಹಾರಾಷ್ಟ್ರ ಸರ್ಕಾರದ ಮರಾಠಿ ಭಾಷಾ ವಿಭಾಗವು ಕೊಂಕಣ ರೈಲ್ವೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದು, ತ್ರಿಭಾಷಾ ಸೂತ್ರವನ್ನು ಪಾಲಿಸುವಂತೆ ತಿಳಿಸಿದೆ.

‘ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಇಂಗ್ಲಿಷ್‌, ಹಿಂದಿ ಜೊತೆಗೆ ಆಯಾ ರಾಜ್ಯಗಳ ಭಾಷೆ ಬಳಸುವುದು ಕಡ್ಡಾಯ. ಹೀಗಾಗಿ ಜಾಹೀರಾತು, ಸೂಚನಾ ಫಲಕ ಹಾಗೂ ಪತ್ರಿಕಾ ಪ್ರಕಟಣೆಗಳನ್ನು ನೀಡುವಾಗ ಮರಾಠಿಯನ್ನು ಕಡ್ಡಾಯವಾಗಿ ಬಳಸಬೇಕು’ ಎಂದು ತಿಳಿಸಲಾಗಿದೆ.

ಮುಂಬೈ ಬಳಿಯ ರೋಹಾದಿಂದ ಮಂಗಳೂರು ಬಳಿಯ ತೊಕ್ಕೂರು ವರೆಗೆ ಒಟ್ಟು 756 ಕಿ.ಮೀ. ಉದ್ದದ ಮಾರ್ಗದಲ್ಲಿ ಕೊಂಕಣ ರೈಲ್ವೆ ಕಾರ್ಯಾಚರಣೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT