ಕೊಂಕಣ ರೈಲ್ವೆ ಮಾರ್ಗದಲ್ಲಿ ವಿದ್ಯುದೀಕರಣ, ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಕೊಂಕಣ ರೈಲ್ವೇಯ ಕಾರವಾರ ಮತ್ತು ತೋಕೂರು ಮಾರ್ಗದ ವಿದ್ಯುದೀಕರಣ ಮಾಡಲಾಗುತ್ತಿದೆ. ಇದರ ಪ್ರಮುಖ ಕಾಮಗಾರಿಯೊಂದನ್ನು ಸೆ.15ರಂದು ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಅಂದು ಮಂಗಳೂರು ಸೆಂಟ್ರಲ್– ಮಡಗಾಂವ್– ಮಂಗಳೂರು ಸೆಂಟ್ರಲ್ ಇಂಟರ್ ಸಿಟಿ (ರೈಲು ಸಂಖ್ಯೆ: 22636 / 22635) ರೈಲು ಸಂಚಾರ ರದ್ದು ಮಾಡಲಾಗಿದೆ.Last Updated 14 ಸೆಪ್ಟೆಂಬರ್ 2018, 14:11 IST