ಕಾನ್ಪುರ: ಜಿಲ್ಲೆಯಲ್ಲಿ ಹೊಸದಾಗಿ 30 ಜನರಿಗೆ ಝೀಕಾ ವೈರಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕಾನ್ಪುರದಲ್ಲಿಇದುವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ66ಕ್ಕೇರಿದೆ.ಸೋಂಕಿತರಲ್ಲಿ45 ಪುರುಷರು ಹಾಗೂ21 ಮಹಿಳೆಯರು ಇದ್ದಾರೆ.

ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿಯೊಬ್ಬರಿಗೆಅಕ್ಟೋಬರ್23 ರಂದು ಸೋಂಕು ದೃಢಪಟ್ಟಿತ್ತು. ಇದು ಜಿಲ್ಲೆಯಲ್ಲಿ ವರದಿಯಾದ ಮೊದಲ ಪ್ರಕರಣವೂ ಹೌದು.

ʼಕಾನ್ಪುರದಲ್ಲಿ 30 ಜನರಿಗೆ ಝೀಕಾ ವೈರಸ್ ಸೋಂಕು ದೃಢಪಟ್ಟಿದೆʼ ಎಂದು ಜಿಲ್ಲಾಧಿಕಾರಿ ವಿಶಾಖ್ ಜಿ. ಅಯ್ಯರ್ ತಿಳಿಸಿದ್ದಾರೆ.

ಐಎಎಫ್ ವಿಮಾನ ನಿಲ್ದಾಣದಸುತ್ತಲಿನ ಪ್ರದೇಶಗಳಲ್ಲಿಮಾದರಿಗಳನ್ನು ಸಂಗ್ರಹಿಸಿ, ಲಖನೌನಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯದ (ಕೆಜಿಎಂಯು) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವುಗಳಲ್ಲಿ ಮೂವತ್ತುಜನರಿಗೆ ಸೋಂಕು ಖಚಿತವಾಗಿದೆ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

ಝೀಕಾ ಸೊಳ್ಳಿಗಳಿಂದ ಹರಡುವ ವೈರಸ್ ಆಗಿದ್ದು, ಸೊಳ್ಳೆಗಳನ್ನು ಇಲ್ಲವಾಗಿಸುವುದೇ ಸುರಕ್ಷಿತ ಕ್ರಮವಾಗಿದೆ ಎಂದೂ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಉತ್ತರ ಪ್ರದೇಶದ ಕಾನ್ಪುರದಲ್ಲಿ ಮೊದಲ ಝೀಕಾ ಪ್ರಕರಣ

ಸೋಂಕುನಿಯಂತ್ರಣದ ಸಲುವಾಗಿ ಆರೋಗ್ಯ ಕಾರ್ಯಕರ್ತರು ಸ್ಯಾನಿಟೈಸೇಷನ್ ಕಾರ್ಯ ಮತ್ತು ಜ್ವರ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತುಗರ್ಭಿಣಿಯರನ್ನು ಪರೀಕ್ಷೆಗೊಳಪಡಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.

ವೈರಸ್ ಹರಡದಂತೆನಿಗಾ ಇಡುವಂತೆ ಮತ್ತು ಮನೆಮನೆವರೆಗೆ ತೆರಳಿ ಝೀಕಾ ವೈರಸ್ ಸೋಂಕು ಪರೀಕ್ಷೆ, ಸ್ಯಾನಿಟೈಸೇಷನ್ ಕಾರ್ಯ ನಡೆಸುವಂತೆ ಆರೋಗ್ಯ ಇಲಾಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.