ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಅಂತ್ಯವಾಗಿದ್ದು, ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಆಡಳಿತಾರೂಢ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಗೆ ಹಿನ್ನೆಡೆಯಾಗಲಿದೆ. ಸಮಾಜವಾದಿ ಪಕ್ಷವು ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ.

LIVE| Exit Poll 2022: ಪಂಚ ರಾಜ್ಯಗಳಲ್ಲಿ ಯಾರಿಗೆಷ್ಟು ಸ್ಥಾನ, ಯಾರಿಗೆ ಅಧಿಕಾರ?

ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶದ 403 ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಕೂಟವು 240 ಕ್ಷೇತ್ರಗಳನ್ನು ಗೆಲ್ಲಲಿದೆ. ಸಮಾಜವಾದಿ ಪಕ್ಷದ ಮೈತ್ರಿಕೂಟವು 140 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಎಸ್‌ಪಿಗೆ 17 ಮತ್ತು ಉಳಿದವರು 6 ಸ್ಥಾನಗಳಲ್ಲಿ ಜಯಸಾಧಿಸಬಹುದು.

ಸಿಎನ್‌ಎನ್ ನ್ಯೂಸ್ 18 ಪ್ರಕಾರ, ಬಿಜೆಪಿ ಮೈತ್ರಿಕೂಟವು 262–277 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಎಸ್‌ಪಿ ಮೈತ್ರಿಕೂಟವು 119–134 ಕ್ಷೇತ್ರಗಳಲ್ಲಿ ಜಯಸಾಧಿಸಬಹುದು. ಬಿಎಸ್‌ಪಿಯು 7–15, ಕಾಂಗ್ರೆಸ್ 3–8 ಕ್ಷೇತ್ರಗಳನ್ನು ಗೆಲ್ಲಬಹುದು.

ಇಟಿಜಿ ರಿಸರ್ಚ್ ಸಮೀಕ್ಷೆ ಪ್ರಕಾರ, ಬಿಜೆಪಿ ಮೈತ್ರಿಕೂಟವು 230–245 ಕ್ಷೇತ್ರಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಪ್ರಬಲ ಎದುರಾಳಿ ಎಸ್‌ಪಿ ಮೈತ್ರಿಕೂಟವು 150–165 ಮತ್ತು ಬಿಎಸ್‌ಪಿ 5–10 ಸ್ಥಾನದಲ್ಲಿ ಜಯ ಗಳಿಸಬಹುದು. ಕಾಂಗ್ರೆಸ್‌ಗೆ 2–6 ಸ್ಥಾನಗಳು ದೊರೆಯಬಹುದು.

ನ್ಯೂಸ್ ಎಕ್ಸ್– ಪೋಲ್‌ಸ್ಟರ್ ಸಮೀಕ್ಷೆಯೂ ಸಹ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿದೆ. ಬಿಜೆಪಿ ಮೈತ್ರಿಕೂಟ 211–245, ಎಸ್‌ಪಿ ಮೈತ್ರಿಕೂಟ 146–160, ಬಿಎಸ್‌ಪಿ 14–24 ಹಾಗೂ ಕಾಂಗ್ರೆಸ್ 4–6 ಕ್ಷೇತ್ರಗಳಲ್ಲಿ ಗೆಲ್ಲಬಹುದು.

ಟೈಮ್ಸ್ ನೌ–ವಿಇಟಿಒ

ಬಿಜೆಪಿ 225
ಎಸ್‌ಪಿ+ 151
ಬಿಎಸ್‌ಪಿ 14
ಇತರೆ 13

ಎಬಿಪಿ ನ್ಯೂಸ್ – ಸಿವೋಟರ್

ಬಿಜೆಪಿ 228–244
ಎಸ್‌ಪಿ+ 132–148
ಬಿಎಸ್‌ಪಿ 13–21
ಇತರೆ 6–8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.