ಸಿಂದಗಿ: ಉತ್ತರಾಖಂಡ ಭೀಕರ ಪ್ರವಾಹದಲ್ಲಿ ಪಟ್ಟಣದ ವಿಶ್ರಾಂತ ಪ್ರಾಚಾರ್ಯ ಎಸ್.ಬಿ.ಪಂಪಣ್ಣವರ ಅವರ ಪುತ್ರಿ ಡಾ.ಅನಿತಾ ಪಂಪಣ್ಣವರ ಸಿಲುಕಿದ್ದಾರೆ.

ಅವರು ಉತ್ತರಾಖಂಡ ಪಿತೋಘರ ಆರ್ಮಿ ಆಸ್ಪತ್ರೆಯಲ್ಲಿ ಕಳೆದ ಐದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ರಜೆಯ ಹಿನ್ನೆಲೆಯಲ್ಲಿ ತಮ್ಮೂರು ಸಿಂದಗಿಗೆ ಬರುವ ಸಂದರ್ಭದಲ್ಲಿ ಹಲದವಾಣಿ ಹತ್ತಿರ ಎರಡು ಕಡೆ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಅವರು ಮೂರು ದಿನಗಳಿಂದ ಅಲ್ಲಿಯೇ ಪರದಾಡುತ್ತಿದ್ದಾರೆ ಎಂದು ಅವರ ತಂದೆ ತಿಳಿಸಿದ್ದಾರೆ.

ಸತತ ಎರಡು ದಿನ ಸುರಿದ ಮಳೆಯ ಪರಿಣಾಮದಿಂದ ಚೇತರಿಸಿಕೊಳ್ಳಲು ಉತ್ತರಾಖಂಡಕ್ಕೆ ಇನ್ನೂ ಬಹಳ ಕಾಲ ಬೇಕಾಗಬಹುದು. ಮಳೆಯಿಂದಾಗಿ ಭಾನುವಾರದಿಂದ ಬುಧವಾರದವರೆಗೆ 52 ಮಂದಿ ಮೃತಪಟ್ಟಿದ್ಧಾರೆ. ಮನೆಗಳು ಕುಸಿದಿದ್ದು ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಆತಂಕ ವ್ಯಕ್ತವಾಗಿದೆ. 5 ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಮುಂದುವರಿದಿದೆ.

ಭೂಕುಸಿತದಿಂದಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಹಲವು ರಸ್ತೆಗಳಲ್ಲಿ ದೊಡ್ಡ ದೊಡ್ಡ ಕಲ್ಲುಗಳು ಇವೆ. ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತವಾಗಿದೆ.

ಇದನ್ನೂ ಓದಿ–ಉತ್ತರಾಖಂಡ-ಕೇರಳ | ಮಳೆ ಬಿಡುವು: ರಕ್ಷಣೆ, ಪರಿಹಾರವೇ ಸವಾಲು

ಮಳೆಯ ಅಬ್ಬರ ನಿಂತಿದೆ. ಆದರೆ, ಅವಶೇಷಗಳಡಿಯಲ್ಲಿ ಸಿಲುಕಿದವರ ಪತ್ತೆ ಮತ್ತು ರಕ್ಷಣೆ, ವಿದ್ಯುತ್ ಸಂಪರ್ಕ ಮರಸ್ಥಾಪನೆಯು ದೊಡ್ಡ ಸವಾಲಾಗಿದೆ. ಮಳೆಯಿಂದ ಭಾರಿ ಸಮಸ್ಯೆಗೆ ಒಳಗಾಗಿದ್ದ ಪ್ರವಾಸಿ ತಾಣ ನೈನಿತಾಲ್ ಸಹಜ ಸ್ಥಿತಿಗೆ ಮರಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.