ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣ ಕಾಂಗ್ರೆಸ್‌ ನಂಟು: ತನಿಖೆಗೆ ಬಿಆರ್‌ಎಸ್‌ ಆಗ್ರಹ

Published : 25 ಆಗಸ್ಟ್ 2024, 15:39 IST
Last Updated : 25 ಆಗಸ್ಟ್ 2024, 15:39 IST
ಫಾಲೋ ಮಾಡಿ
Comments

ಹೈದರಾಬಾದ್‌: ರಾಜ್ಯದಲ್ಲಿ ಚುನಾವಣೆಗೆ ಕಾಂಗ್ರೆಸ್‌ ಮುಖಂಡರು, ಕರ್ನಾಟಕದಿಂದ ಅಕ್ರಮವಾಗಿ ವರ್ಗಾವಣೆ ಆಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಬಳಸಿದ್ದಾರೆ ಎಂದು ಬಿ‌ಆರ್‌ಎಸ್‌ ಪಕ್ಷ ಆರೋಪಿಸಿದೆ.

ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು, ‘ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕದ ಎಸ್‌ಐಟಿ ಉಲ್ಲೇಖಿಸಿರುವ ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸಲಿ’ ಕಾಂಗ್ರೆಸ್ ಮುಖಂಡರಿಗೆ ಆಗ್ರಹಪಡಿಸಿದ್ದಾರೆ.

‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕ್ಕೂ ತೆಲಂಗಾಣದ ರಾಜಕಾರಣಿಗಳು, ಉದ್ಯಮಿಗಳಿಗೂ ಸಂಪರ್ಕವಿದೆ. ನಿಗಮದ ₹45 ಕೋಟಿ ವರ್ಗಾವಣೆ ಆಗಿದೆ ಎನ್ನಲಾದ ಬ್ಯಾಂಕ್‌ಗಳ 9 ಖಾತೆಗಳು ಯಾರ ಹೆಸರಿನಲ್ಲಿವೆ, ವಿ6 ಬ್ಯುಸಿನೆಸ್‌ನ ಮಾಲೀಕರು ಯಾರು? ಲೋಕಸಭೆ ಚುನಾವಣೆ ವೇಳೆ ಹಣ ಪಡೆದಿದ್ದ ಬಾರ್‌ಗಳು, ಚಿನ್ನದ ಮಳಿಗೆಗಳ ಮಾಲೀಕರಾರು? ಇವರಿಗೂ ಕಾಂಗ್ರೆಸ್‌ ಪಕ್ಷಕ್ಕೂ ಏನು ಸಂಬಂಧ’ ಎಂದು ಪ್ರಶ್ನಿಸಿದ್ದಾರೆ.

‌ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತು ಕಾಂಗ್ರೆಸ್ ನಾಯಕರಿಗೂ ಸಂಬಂಧವಿದೆ ಎಂದು ಬಿಂಬಿಸುವ ಕಿರು ವಿಡಿಯೊ ಅನ್ನೂ ಅವರು ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಪದಚ್ಯುತರಾದರೆ, ತೆಲಂಗಾಣ ಸರ್ಕಾರವು ಪದಚ್ಯುತವಾಗಲಿದೆ ಎಂದು ಕರ್ನಾಟಕದ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಅದರರ್ಥ ಏನು? ಗುರುತರ ಶಂಕೆ ಬಳಿಕವು ಇ.ಡಿ ಏಕೆ ಮೌನವಾಗಿದೆ? ಇಲ್ಲಿ ಕಾಂಗ್ರೆಸ್‌ನವರನ್ನು ರಕ್ಷಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT