ಚೆನ್ನೈ: ವಿಡುಥಲೈ ಚಿರುಥೈಗಲ್ ಕಚ್ಚಿ(ವಿಸಿಕೆ) ಅನ್ನು ರಾಜ್ಯ ಪಕ್ಷವೆಂದು ಚುನಾವಣಾ ಆಯೋಗ ಪರಿಗಣಿಸಿದೆ ಎಂದು ಪಕ್ಷದ ಮುಖ್ಯಸ್ಥ ತೋಲ್ ತಿರುಮವಲವನ್ ಅವರು ಶನಿವಾರ ಹೇಳಿದ್ದಾರೆ.

ಹೂ ಕುಂಡ ಚಿಹ್ನೆಯನ್ನು ಪಕ್ಷಕ್ಕೆ ಅಧಿಕೃತವಾಗಿ ನೀಡಲಾಗಿದೆ ಎಂದು ‘ಎಕ್ಸ್’ ಮೂಲಕ ತಿಳಿಸಿರುವ ಅವರು ಚುನಾವಣಾ ಆಯೋಗದ ಪತ್ರದ ಪ್ರತಿಯನ್ನು ಪೋಸ್ಟ್ ಮಾಡಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ವಿಸಿಕೆ ಗಳಿಸಿರುವ ಮತಗಳನ್ನು ಗಮನಿಸಿದಾಗ ರಾಜ್ಯ ಪಕ್ಷದ ಸ್ಥಾನ ಪಡೆಯಲು ಅಗತ್ಯವಿರುವ ಮಾನದಂಡವನ್ನು ಪೂರ್ಣಗೊಳಿಸಿದೆ. ಹಾಗಾಗಿ ವಿಸಿಕೆಗೆ ರಾಜ್ಯ ಪಕ್ಷದ ಮಾನ್ಯತೆ ನೀಡಲಾಗಿದೆ. ಪಕ್ಷದ ಬೇಡಿಕೆಯಂತೆ ಹೂಕುಂಡದ ಚಿಹ್ನೆ ಹಂಚಿಕೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಪತ್ರದ ಮೂಲಕ ತಿಳಿಸಿದೆ.

ವಿಸಿಕೆಯು ಆಡಳಿತಾರೂಢ ಡಿಎಂಕೆ ನೇತೃತ್ವದ ಮೈತ್ರಿಕೂಟದ ಪ್ರಮುಖ ಭಾಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.