ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲೇ ನಮಾಜ್‌: ಕ್ಷಮೆಯಾಚಿಸುವಂತೆ ಮಾಡಿದ ವಿಎಚ್‌ಪಿ ಕಾರ್ಯಕರ್ತರು 

Last Updated 15 ಸೆಪ್ಟೆಂಬರ್ 2022, 2:09 IST
ಅಕ್ಷರ ಗಾತ್ರ

ಶಹಜಹಾನ್‌ಪುರ ( ಉತ್ತರ ಪ್ರದೇಶ): ರಾಜಸ್ಥಾನದ ಅಜ್ಮೀರ್‌ ಷರೀಫ್‌ ದರ್ಗಾಕ್ಕೆ ಹೋಗುವ ವೇಳೆ ದಾರಿ ಮಧ್ಯದಲ್ಲೇ ನಮಾಜ್‌ ಮಾಡಿದ್ದ ಮುಸ್ಲಿಂ ಯಾತ್ರಾರ್ಥಿಗಳಿಂದ ವಿಶ್ವ ಹಿಂದು ಪರಿಷತ್‌ನ ಕಾರ್ಯಕರ್ತರು ಕ್ಷಮೆ ಯಾಚನೆ ಮಾಡಿಸಿದ್ದಾರೆ.

ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಗುಂಪು ಕ್ಷಮೆ ಯಾಚಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಕೆಲ ಮಂದಿ ಕಿವಿ ಹಿಡಿದು ಕ್ಷಮೆ ಕೋರುತ್ತಿದ್ದರೆ, ಇನ್ನು ಕೆಲವರು ಬಸ್ಕಿ ಹೊಡೆಯುತ್ತಿರುವುದು ವಿಡಿಯೊದಲ್ಲಿದೆ.

‌ಪಶ್ಚಿಮ ಬಂಗಾಳದಿಂದ ರಾಜಸ್ಥಾನಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಶಹಜಹಾನ್‌ಪುರದ ತಿಲ್ಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ನಮಾಜ್ ಮಾಡಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ (ಶಹಜಹಾನ್‌ಪುರ), ಎಸ್.ಆನಂದ್ ದೃಢಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ವಾಜಪೇಯಿ, ‘ಅಜ್ಮೀರ್ ಷರೀಫ್ ದರ್ಗಾಕ್ಕೆ ತೆರಳುತ್ತಿದ್ದ ಹದಿನೆಂಟು ಜನರನ್ನು ದೂರಿನ ಮೇರೆಗೆ ತಿಲ್ಹಾರ್ ಠಾಣೆಗೆ ಕರೆತರಲಾಗಿತ್ತು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಅವರೆಲ್ಲರೂ ಲಿಖಿತ ರೂಪದಲ್ಲಿ ಕ್ಷಮೆಯಾಚಿಸಿದ್ದಾರೆ’ ಎಂದು ತಿಳಿಸಿದ್ದಾರೆ.

‘ಕೆಲಸದ ನಿಮಿತ್ತ ನಾನು ರಸ್ತೆಯಲ್ಲಿ ಹೋಗುತ್ತಿದ್ದೆ. ಆಗ ರಸ್ತೆ ಬದಿಯಲ್ಲಿ ಕೆಲವರು ನಮಾಜ್ ಮಾಡುತ್ತಿರುವುದು ಕಾಣಿಸಿತು. ಕೂಡಲೆ ಅವರನ್ನು ನಾನು ಎಚ್ಚರಿಸಿದ್ದೆ. ನೀವು ಉತ್ತರ ಪ್ರದೇಶದಲ್ಲಿದ್ದೀರಿ. ಇಲ್ಲಿ ಬಹಿರಂಗವಾಗಿ ನಮಾಜ್‌ ಮಾಡುವುದು ನಿಷಿದ್ಧ ಎಂದು ಮನವರಿಕೆ ಮಾಡಿದ್ದೆ. ನಂತರ ದೂರು ನೀಡಿದ್ದೆ’ ಎಂದು ಸ್ಥಳೀಯ ವಿಎಚ್‌ಪಿ ಮುಖಂಡ ರಾಜೇಶ್ ಅವಸ್ತಿ ತಿಳಿಸಿದ್ದಾರೆ.

ಕಿವಿ ಹಿಡಿದುಕೊಂಡು ಕ್ಷಮೆ ಕೇಳುವಂತೆ ಮುಸ್ಲಿಂ ಯಾತ್ರಾರ್ಥಿಗಳಿಗೆ ವಿಎಚ್‌ಪಿ ಕಾರ್ಯಕರ್ತರು ಒತ್ತಾಯಿಸುತ್ತಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೊಗಳಲ್ಲಿ ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT