ನವದೆಹಲಿ: ಎನ್ಡಿಎ ಮೈತ್ರಿಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಸಿ.ಪಿ.ರಾಧಾಕೃಷ್ಣನ್ ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇದ್ದರು.

ರಾಧಾಕೃಷ್ಣನ್ ಅವರ ಪರವಾಗಿ ಪ್ರಧಾನಿ ಮೋದಿ ಅವರು ನಾಲ್ಕು ಸೆಟ್ ನಾಮಪತ್ರಗಳನ್ನು ಚುನಾವಣಾಧಿಕಾರಿ, ರಾಜ್ಯಸಭಾ ಕಾರ್ಯದರ್ಶಿ ಪಿ.ಸಿ.ಮೋದಿ ಅವರಿಗೆ ಹಸ್ತಾಂತರಿಸಿದರು. ಈ ನಾಮಪತ್ರಗಳಿಗೆ ಮೋದಿ, ಸಿಂಗ್, ಶಾ ಹಾಗೂ ಜೆಡಿಯು ನಾಯಕ ರಾಜೀವ್ ರಂಜನ್ ಸಿಂಗ್ ಸೂಚಕರಾಗಿ ಸಹಿ ಹಾಕಿದರು. ನಾಮಪತ್ರಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿ ರಾಧಾಕೃಷ್ಣನ್ ಅವರಿಂದ ರಿಜಿಸ್ಟಾರ್ಗೆ ಸಹಿ ಹಾಕಿಸಿದರು. ನಂತರ ಅವರು, ನಾಮಪತ್ರದ ಸ್ವೀಕೃತಿ ಪತ್ರವನ್ನು ಪ್ರಧಾನಿ ಅವರಿಗೆ ನೀಡಿದರು.

ನಮನ: ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರೇರಣಾ ಸ್ಥಳದಲ್ಲಿರುವ ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಹಾಗೂ ಸಂಸತ್ ಭವನದ ಆವರಣದಲ್ಲಿರುವ ಗಣ್ಯ ವ್ಯಕ್ತಿಗಳ ಪ್ರತಿಮೆಗೆ ರಾಧಾಕೃಷ್ಣನ್ ಗೌರವ ಸಲ್ಲಿಸಿದರು.

ಉಪ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು, ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯರು ಮತ ಚಲಾಯಿಸಬಹುದಾಗಿದೆ.

ಉಭಯ ಸದನಗಳಲ್ಲಿ 781 ಸದಸ್ಯರ ಬಲ ಹೊಂದಿದ್ದು, ಬಹುಮತ ಪಡೆಯಲು 391 ಸದಸ್ಯರ ಬೆಂಬಲ ಅಗತ್ಯ. ಆಡಳಿತರೂಢ ಎನ್ಡಿಎ ಮೈತ್ರಿಕೂಟವು 422 ಸದಸ್ಯರ ಬಲ ಹೊಂದಿದೆ. ವೈಎಸ್ಆರ್ಸಿಪಿ ಪಕ್ಷವು ಕೂಡ ಈಗಾಗಲೇ ರಾಧಾಕೃಷ್ಣನ್ ಅವರಿಗೆ ಬೆಂಬಲ ಘೋಷಿಸಿದೆ.
.ಉಪರಾಷ್ಟ್ರಪತಿ ಚುನಾವಣೆ: ನಿವೃತ್ತ ನ್ಯಾ. ಸುದರ್ಶನ ರೆಡ್ಡಿ INDIA ಬಣದ ಅಭ್ಯರ್ಥಿ.

ಕೊಯಂಬತ್ತೂರ್ ಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆ

ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಜವಾಬ್ದಾರಿ

ಅಖಿಲ ಭಾರತ ತೆಂಗು ನಾರು ಮಂಡಳಿ ಮುಖ್ಯಸ್ಥರಾಗಿಯೂ ಜವಾಬ್ದಾರಿ

ಜಾರ್ಖಂಡ್ ರಾಜ್ಯಪಾಲರಾಗಿ ಜವಾಬ್ದಾರಿ– ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲ

.ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಸಿ.ಪಿ.ರಾಧಾಕೃಷ್ಣನ್: ಯಾರಿವರು?.
ನಾಮಪತ್ರಗಳನ್ನು ಪರಿಶೀಲಿಸಿದ ಚುನಾವಣಾಧಿಕಾರಿ ರಾಧಾಕೃಷ್ಣನ್ ಅವರಿಂದ ಸಹಿ ಪಡೆದುಕೊಂಡರು. ಬಳಿಕ ಪ್ರಧಾನಿ ಮೋದಿಯವರಿಗೆ ಸ್ವೀಕೃತಿ ಪತ್ರವನ್ನು ನೀಡಿದರು.

ಮೋದಿ, ಶಾ, ಸಚಿವರಾದ ಪ್ರಲ್ಹಾದ ಜೋಶಿ, ಧರ್ಮೇಂದ್ರ ಪ್ರಧಾನ್ ಮತ್ತು ಟಿಡಿಪಿ ನಾಯಕ ಮತ್ತು ಕೇಂದ್ರ ಸಚಿವ ಕೆ. ರಾಮ್ ಮೋಹನ್ ನಾಯ್ಡು, ಶಿವಸೇನಾ ನಾಯಕ ಶ್ರೀಕಾಂತ್ ಶಿಂಧೆ, ಎಲ್ಜೆಎಸ್ಪಿ (ಆರ್ವಿ) ನಾಯಕ ಚಿರಾಗ್ ಪಾಸ್ವಾನ್, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಇತರ ಎನ್ಡಿಎ ನಾಯಕರು ರಾಧಾಕೃಷ್ಣನ್ ಅವರನ್ನು ಸಂಸತ್ತಿನ ಚುನಾವಣಾಧಿಕಾರಿ ಕಚೇರಿಗೆ ಕರೆದುಕೊಂಡು ಹೋದರು.

ಇದಕ್ಕೂ ಮೊದಲು, ರಾಧಾಕೃಷ್ಣನ್ ಸಂಸತ್ ಸಂಕೀರ್ಣದಲ್ಲಿರುವ ಪ್ರೇರಣಾ ಸ್ಥಳದಲ್ಲಿರುವ ಮಹಾತ್ಮ ಗಾಂಧಿ ಮತ್ತು ಇತರ ರಾಷ್ಟ್ರೀಯ ನಾಯಕರಿಗೆ ಗೌರವ ಸಲ್ಲಿಸಿದರು.
.ಜನರಾಜಕಾರಣ | ಸಂದೀಪ್ ಶಾಸ್ತ್ರಿ ಲೇಖನ: ಉಪರಾಷ್ಟ್ರಪತಿ ಚುನಾವಣೆ ಸುತ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.