ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವುದನ್ನು ಸ್ವಾಗತಿಸಿರುವ ಆಮ್ ಆದ್ಮಿ ಪಕ್ಷವು, ಇದು ಸತ್ಯಕ್ಕೆ ಸಂದ ಜಯ ಎಂದು ಹೇಳಿದೆ. ಅಲ್ಲದೆ ಜೈಲಿನಲ್ಲಿರುವ ಇತರ ನಾಯಕರಿಗೂ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
The entire nation rejoices today as the hero of Delhi's education revolution, Manish Sisodia, has been granted bail. I express my heartfelt gratitude to the Hon’ble Supreme Court.
— Raghav Chadha (@raghav_chadha) August 9, 2024
Manish bhai was kept behind bars for 530 days. His crime being that he dreamt of giving a bright… pic.twitter.com/aVZF211XhW
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ 17 ತಿಂಗಳಿನಿಂದ ಕಸ್ಟಡಿಯಲ್ಲಿದ್ದ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
‘ದೆಹಲಿ ಶಿಕ್ಷಣ ಕ್ರಾಂತಿ ಹೀರೋ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ಲಭಿಸಿದ್ದರಿಂದ ಇಡೀ ದೇಶವೇ ಸಂತೋಷದಲ್ಲಿದೆ. ಗೌರವಾನ್ವಿತ ಸುಪ್ರೀಂ ಕೋರ್ಟ್‌ಗೆ ನಾನು ನನ್ನ ಹೃದಯದ ಅಂತರಾಳದಿಂದ ಧನ್ಯವಾದ ಅರ್ಪಿಸುತ್ತೇನೆ. ಮನೀಶ್ ಅವರನ್ನು 530 ದಿನಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಬಡವರ ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡಿದ್ದೇ ಅವರ ತಪ್ಪಾಗಿತ್ತು. ಪ್ರೀತಿಯ ವಿದ್ಯಾರ್ಥಿಗಳೇ ನಿಮ್ಮ ಮನೀಷ್ ಅಂಕಲ್ ಮತ್ತೆ ಬರುತ್ತಿದ್ದಾರೆ’ ಎಂದು ಎಎಪಿ ಸಂಸದ ರಾಘವ ಛಡ್ಡಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
VIDEO | "After a long wait of 17 months, we have got this victory. I would like to ask PM Modi and BJP - how long are they going to continue doing vendetta politics? This (SC's order) is tight slap on 'Tanashahi' government," says AAP MP Sanjay Singh (@SanjayAzadSln) on Supreme… pic.twitter.com/OcPc0jf4fZ
— Press Trust of India (@PTI_News) August 9, 2024
‘ಈ ತೀರ್ಪು ಕೇಂದ್ರ ಸರ್ಕಾರದ ಏಕಚಕ್ರಾಧಿಪತ್ಯಕ್ಕೆ ಮಾಡಿದ ಕಪಾಳಮೋಕ್ಷ. ಅವರು 17 ತಿಂಗಳು ಜೈಲಿನಲ್ಲಿದ್ದರು. ಆ ಅವಧಿಯಲ್ಲಿ ವರ ಜೀವನವೇ ಹಾಳಾಗಿತ್ತು. ಆ ಅವಧಿಯಲ್ಲಿ ಅವರು ಮಕ್ಕಳ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿದ್ದರು. ಜೈಲಿನಲ್ಲಿರುವ ನಮ್ಮ ಇತರ ನಾಯಕರಾದ ಅರವಿಂದ ಕೇಜ್ರಿವಾಲ್ ಹಾಗೂ ಸತ್ಯೇಂದರ್ ಜೈನ್ ಅವರಿಗೂ ಜಾಮೀನು ಹಾಗೂ ನ್ಯಾಯ ಸಿಗುವ ವಿಶ್ವಾಸವಿದೆ. ಸುಪ್ರೀ ಕೋರ್ಟ್ ತೀರ್ಪಿಗೆ ನಾನು ತಲೆ ಬಾಗುವೆ. ಇದು ಸತ್ಯಕ್ಕೆ ಸಂದ ಜಯ’ ಎಂದು ಇನ್ನೊರ್ವ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.
सत्यमेव जयते https://t.co/iE1dA65Y03
— Atishi (@AtishiAAP) August 9, 2024
ದೆಹಲಿ ಶಿಕ್ಷಣ ಸಚಿವೆ ಅತಿಶಿ ಮರ್ಲೆನಾ ಅವರು ‘ಸತ್ಯಮೇವ ಜಯತೇ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.