ಜಿಂದ್(ಹರಿಯಾಣ): ಜುಲಾನಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸ್ತಿಪಟು ವಿನೇಶ್ ಫೋಗಟ್ ಬುಧವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿನೇಶ್, ‘ರಾಜಕೀಯಕ್ಕೆ ಬರುತ್ತಿರುವುದು ನನ್ನ ಸೌಭಾಗ್ಯ. ಎಲ್ಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಜುಲಾನಾ ಜನತೆ ನನಗೆ ನೀಡುತ್ತಿರುವ ಪ್ರೀತಿಗೆ ಆಭಾರಿಯಾಗಿದ್ದೇನೆ’ ಎಂದರು.
‘ಜುಲಾನಾದಲ್ಲಿ ಮಾತ್ರವಲ್ಲ ಇಡೀ ಹರಿಯಾಣದಲ್ಲೇ ಕಾಂಗ್ರೆಸ್‌ಗೆ ದೊಡ್ಡ ಜಯ ಸಿಗಲಿದೆ. ವಿನೇಶ್ ಫೋಗಟ್ ಸಾಕಷ್ಟು ಹೋರಾಟ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅವರ ಹೋರಾಟ ಎಲ್ಲರಿಗೂ ಸ್ಪೂರ್ತಿಯಾಗಿದೆ’ ಎಂದು ಸಂಸದ ದೀಪೇಂದರ್ ಹೂಡಾ ಹೇಳಿದರು.
ವಿನೇಶ್ ವಿರುದ್ಧ ಜುಲಾನಾ ಕ್ಷೇತ್ರದಿಂದ ಕ್ಯಾ.ಯೋಗೇಶ್ ಬೈರಾಗಿ ಅವರನ್ನು ಬಿಜೆಪಿಯು ಕಣಕ್ಕೆ ಇಳಿಸಿದೆ.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8ಕ್ಕೆ ಮತ ಎಣಿಕೆ ನಡೆಯಲಿದೆ.