ವಿಶಾಖಪಟ್ಟಣ (ಆಂಧ್ರಪ್ರದೇಶ): ಅನಿಲ ಸೋರಿಕೆಯಿಂದ ಉಂಟಾಗಿರುವಹಾನಿ ಸರಿಪಡಿಸಲು ಆರಂಭಿಕ ಮೊತ್ತ ₹50 ಕೋಟಿ ಠೇವಣಿ ಇಡಬೇಕು ಎಂದು ಎಲ್ ಜಿ ಪಾಲಿಮರ್ಸ್ ಇಂಡಿಯಾ ಸಂಸ್ಥೆಗೆರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ಶುಕ್ರವಾರ ನಿರ್ದೇಶನ ನೀಡಿದೆ.
ಇದಲ್ಲದೆ, ನ್ಯಾಯಮಂಡಳಿಯು ಅನಿಲಸೋರಿಕೆ ದುರಂತಕ್ಕೆ ಸಂಬಂಧಿಸಿದಂತೆ ವಿವರ ನೀಡಬೇಕೆಂದು ಸಂಬಂಧಿಸಿದ ಕೇಂದ್ರ ಪರಿಸರ, ಹವಾಮಾನ ಇಲಾಖೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೋಟೀಸ್ ಜಾರಿಮಾಡಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ
ಗುರುವಾರ ಬೆಳಗಿನ ಜಾವ ವಿಶಾಖಪಟ್ಟಣ(ವೈಝಾಗ್)ದಲ್ಲಿ ಅನಿಲ ಸೋರಿಕೆಯಿಂದಾಗಿ ಇಬ್ಬರು ಹಿರಿಯ ನಾಗರಿಕರು ಸೇರಿದಂತೆ 11 ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ, ಸಾವಿರಕ್ಕೂ ಹೆಚ್ಚು ಮಂದಿಅಸ್ವಸ್ಥರಾಗಿದ್ದಾರೆ.