ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Vocal for Local: ಸ್ಥಳೀಯ ಉತ್ಪನ್ನಗಳ ಖರೀದಿಗೆ ಮೋದಿ ಕರೆ; ಜನರ ಮೆಚ್ಚುಗೆ

Published : 11 ನವೆಂಬರ್ 2023, 11:28 IST
Last Updated : 11 ನವೆಂಬರ್ 2023, 11:28 IST
ಫಾಲೋ ಮಾಡಿ
Comments

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆ ದೀಪಾವಳಿ ಸಂದರ್ಭದಲ್ಲಿ ‘ವೋಕಲ್ ಫಾರ್ ಲೋಕಲ್‘ಗೆ ಕರೆ ನೀಡಿದ ಬೆನ್ನಲೇ ದೇಶದ ನಾಗರೀಕರಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಗಣ್ಯರು, ಸೆಲೆಬ್ರಿಟಿಗಳು ಸೇರಿದಂತೆ ಲಕ್ಷಾಂತರ ಜನ ನಾಗರೀಕರು ‘ವೋಕಲ್ ಫಾರ್ ಲೋಕಲ್‘ ಬೆಂಬಲಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳು, ಚಿತ್ರಗಳು ಹಾಗೂ ಬರಹಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಅವರ ‘ವೋಕಲ್ ಫಾರ್ ಲೋಕಲ್‘ ಕರೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯವಾಗಿ ಸರಕುಗಳನ್ನು ಖರೀದಿ ಮಾಡಿ, ಸ್ಥಳೀಯ ಉದ್ಯಮಿಗಳನ್ನು ಬೆಳಸಬೇಕು ಎಂದು ಹೇಳಿದ್ದಾರೆ. ‘ವೋಕಲ್ ಫಾರ್ ಲೋಕಲ್’ ಯೋಚನೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರ ‘ವೋಕಲ್ ಫಾರ್ ಲೋಕಲ್’ ಅಭಿಯಾನ ಉಪಯುಕ್ತವಾಗಿದೆ. ‘ವೋಕಲ್ ಫಾರ್ ಲೋಕಲ್’ ವಿಡಿಯೊ ನೋಡಿದ ಮೇಲೆ ನನಗೆ ಖುಷಿಯಾಯಿತು. ಬನ್ನಿ ಎಲ್ಲರೂ ‘ವೋಕಲ್ ಫಾರ್ ಲೋಕಲ್’ ಸೇರೋಣ ಎಂದು ಬಾಲಿವುಡ್‌ ನಟ ಅನುಪಮ್‌ ಕೇರ್‌ ಹೇಳಿದ್ದಾರೆ. 

ಬಾಲಿವುಡ್‌ ನಟಿ ಭೂಮಿ ಪೆಡ್ನೇಕರ್ ಅವರು ಕೂಡ ‘ವೋಕಲ್ ಫಾರ್ ಲೋಕಲ್’ ಅನ್ನು ಬೆಂಬಲಿಸಿದ್ದಾರೆ. ಈ ಬಗ್ಗೆ ಅವರು ಒಂದು ವಿಡಿಯೊ ಹಂಚಿಕೊಂಡಿದ್ದಾರೆ. ಭಾರತೀಯ ಕರಕುಶಲತೆಯನ್ನು ವಿಶ್ವ ಮಟ್ಟದಲ್ಲಿ ಬೆಳೆಸಲು ಪ್ರಧಾನಿ ಮೋದಿ ಅವರ ಐಡಿಯಾ ಅತ್ಯುತ್ತಮವಾಗಿದೆ. ನಾವು ಕೂಡ ಪ್ರಧಾನಮಂತ್ರಿಗಳೊಂದಿಗೆ ವೋಕಲ್ ಫಾರ್ ಲೋಕಲ್’ ಸೇರೋಣ ಹಾಗೂ ನಮ್ಮ ದೇಶಿಯ ವಸ್ತುಗಳನ್ನು ಬಳಕೆ ಮಾಡೋಣ ಎಂದು ಹೇಳಿದ್ದಾರೆ

ಉದ್ಯಮಿ ಹಾಗೂ ಇನ್ವೆಸ್ಟ್ ಆಜ್ ಫಾರ್ ಕಲ್ ಸಂಸ್ಥಾಪಕ ಅನಂತ್ ಲಾಧಾ ಅವರು ಕೂಡ ವೋಕಲ್ ಫಾರ್ ಲೋಕಲ್‌ ಬೆಂಬಲಿಸಿದ್ದಾರೆ. ಅನಂತ್ ಲಾಧಾ ಅವರು ದೀಪಾವಳಿಗೆ ದೇಶಿ ವಸ್ತುಗಳನ್ನು ಖರೀದಿ ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಹೀಗೆ ಸಾರ್ವಜನಿಕರು, ನಟ ನಟಿಯರು, ಕ್ರೀಡಾಪಟುಗಳು, ಉದ್ಯಮಿಗಳು ಹಾಗೂ ರಾಜಕೀಯ ನಾಯಕರು ‘ವೋಕಲ್ ಫಾರ್ ಲೋಕಲ್’ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ದೀಪಾವಳಿಗೆ ಸ್ಥಳೀಯ ಸರಕುಗಳನ್ನು ಖರೀದಿ ಮಾಡಿ, ಸ್ಥಳೀಯ ಬೆಳವಣಿಗೆಗೆ ಸಹಕಾರಿಯಾಗಬೇಕು ಹಾಗೂ ಈ ಪರಂಪರೆಯನ್ನು ಬೆಳಸಬೇಕು ಎಂದು ಹೇಳಿದ್ದಾರೆ. 

‘ವೋಕಲ್ ಫಾರ್ ಲೋಕಲ್‘ಗೆ ಪ್ರಧಾನಿ ಕರೆ...

ದೀಪಾವಳಿ ಸಂದರ್ಭದಲ್ಲಿ ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿದ್ದಾರೆ. ಇದರಿಂದ ನಮ್ಮ ಸ್ಥಳೀಯ ವ್ಯಾಪರಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ. ಸ್ಥಳೀಯ ಗುಡಿ ಕೈಗಾರಿಕೆಗಳು, ಕುಶಲಕರ್ಮಿಗಳನ್ನು ಬಲಪಡಿಸುವಂತೆ ಮೋದಿ ಅವರು ಜನರಲ್ಲಿ ಮನವಿ ಮಾಡಿದ್ದರು.

ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ತಯಾರಕರ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ‘NaMo ಆಪ್’ ನಲ್ಲಿ ಹಂಚಿಕೊಳ್ಳುವಂತೆ ಅವರು ಕರೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT